ಕೈಕಂಬ:ಕಲಾಶ್ರೀ ಮಿತ್ರ ಬಳಗ ಶ್ರೀಕೃಷ್ಣನಗರ ಬಡಕಬೈಲ್ ಇದರ ವತಿಯಿಂದ 11ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವವು ಅ.25ಗುರುವಾರ ಕಲಾಶ್ರೀ ವೇದಿಕೆ ಶ್ರೀಕೃಷ್ಣನಗರ ಬಡಕಬೈಲ್ನಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಾರೆ ಚೇಂಬರ್ ಆಫ್ ಕಾಮರ್ಸ್& ಇಂಡಸ್ಟ್ರೀಸ್ನ ಅಧ್ಯಕ್ಷರು ರಾಜೇಶ್ ಶಾನುಭೋಗ್ ವಹಿಸಲಿದ್ದಾರೆ. ಉದ್ಘಾಟನೆಯನ್ನು ದ.ಕ.ಜಿ.ಪಂ.ಉಪಾಧ್ಯಕ್ಷರು ಕಸ್ತೂರಿ ಪಂಜ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ತಾ.ಪಂ. ಸದಸ್ಯ ಯಶವಂತ ಕೋಟ್ಯಾನ್ ಪೊಳಲಿ, ರಾಷ್ಟ್ರೀಯ ಸ್ವರ್ಯ ಸೇವಕ ಸಂಘ ಬಂಟ್ವಾಳ ಇದರ ಸಂಘ ಸಂಚಾಲಕರು ಕಾಂತಪ್ಪ ಶೆಟ್ಟಿ ಕೊಡ್ಮಾನ್, ಉದ್ಯಮಿ ರಾಜೇಶ್ ಹೆಗ್ಡೆ ಮಂಗಾಜೆ, ಕರಿಯಂಗಳ ಗ್ರಾ.ಪಂ.ಸದಸ್ಯ ಸುರೇಶ್ ಮಣಿಕಂಠಪುರ, ಕುಶಾಲ್ ಇಂಡಸ್ಟ್ರೀಸ್ ಮಾಲಕ ಜನಾರ್ಧನ ಶೆಟ್ಟಿ ಪುಂಚಮೆ, ಕಲಾಶ್ರೀ ಮಿತ್ರ ಬಳಗ ಅಧ್ಯಕ್ಷ ಬಾಲಕೃಷ್ಣ ಮಾಸ್ಟರ್, ಕಲಾಶ್ರೀ ಮಹಿಳಾ ಬಳಗದ ಅಧ್ಯಕ್ಷೆ ಶಕುಂತಳಾ ಸತೀಶ್ ಮಿಯಾಳ ಉಪಸ್ಥಿತರಿರುವರು.
ಸಾಂದರ್ಬಿಕ ಚಿತ್ರ
ರಾತ್ರಿ 8.30ರಿಂದ ವಿಶ್ವಾಸ್ ಮೆಲೋಡಿಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ಜಿಲ್ಲೆಯ ಯುವ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ-ಗಾನಮೃತ ಕಾರ್ಯಕ್ರಮಗಳು ನಡೆಯಲಿದೆ.
