ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು. ಎಸ್. ಎ.ವಾಮಂಜೂರುಇದರವತಿಯಿಂದ ಪೋಷಕತ್ವ ಹೊಂದಿರುವ ಮಕ್ಕಳಿಗಾಗಿ ಲೈಂಗಿಕ ದೌರ್ಜನ್ಯದ ಬಗ್ಗೆ ಒಂದು ದಿನದಕಾರ್ಯಗಾರವನ್ನು ಅ.22ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಚೈಲ್ಡ್‍ಲೈನ್ ಮಂಗಳೂರು ಇದರ ನಗರಯೋಜನಾಧಿಕಾರಿಯೋಗೀಶ್ ಮಲ್ಲಿಗೆಮಾಡು, ಸಂಪತ್ ಹಾಗೂ ಅವರತಂಡ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸುತ್ತಾಇತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಶೋಷಣೆಗಳು ಹೆಚ್ಚುತ್ತಿರುವುದರಿಂದಅವರ ಭಾವನೆಗಳಿಗೆ, ವರ್ತನೆಗಳಿಗೆ, ಶಿಕ್ಷಣದ ಮೇಲೆ,ಕುಟುಂಬದ ಮೇಲೆ ಮತ್ತುಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯವುಎಲ್ಲಿ, ಯಾವಾಗ ಮತ್ತುಯಾರಿಂದಆಗುತ್ತದೆಎನ್ನುದರ ಬಗ್ಗೆ ಮಾಹಿತಿ ನೀಡಿದಾಗ ಮಕ್ಕಳು ಜಾಗೃತರಾಗಿದೌರ್ಜನ್ಯದಿಂದ ಮುಕ್ತರಾಗಬಹುದು

ದೌರ್ಜನ್ಯಕ್ಕೆ ಒಳಗಾದಂತಹ ಮಕ್ಕಳು ತಮಗೆ ನಂಬಿಕೆ ಇರುವ ವ್ಯಕ್ತಿಗಳಲ್ಲಿ ವಿಷಯವನ್ನು ಹಂಚಿಕೊಂಡುಅದನ್ನು ಪರಿಹರಿಸಿ ಕೊಳ್ಳಬೇಕು. ಲೈಂಗಿಕ ದೌರ್ಜನ್ಯಕ್ಕೆ ಕೇವಲ ಹೆಣ್ಣು ಮಕ್ಕಳುಮಾತ್ರಅಲ್ಲದೆಗಂಡು ಮಕ್ಕಳು ಒಳಗಾಗುತ್ತಾರೆ.ಇಂತಹ ಮಕ್ಕಳ ರಕ್ಷಣೆಗಾಗಿ ಸರಕಾರವು ಮಕ್ಕಳ ರಕ್ಷಣಾಕಾಯಿದೆ (ಫೋಕ್ಸೋ)ಯನ್ನುಜಾರಿಗೆಗೆತಂದಿದ್ದು, ಅಗತ್ಯ ಸಂಧಭರ್ದಲ್ಲಿಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕು ಎಂದು ತಿಳಿಸಿದರು.ಅಂತಿಮವಾಗಿಚೈಲ್ಡ್‍ಲೈನ್‍ನಲೈಂಗಿಕ ದೌರ್ಜನ್ಯಕ್ಕೆ ಸಂಬಂಧ ಪಟ್ಟಕಿರುಚಿತ್ರವನ್ನುತೋರಿಸಲಾಯಿತು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್ ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್. ಎ. ಇದರಯೋಜನಾಧಿಕಾರಿಯಾದ ಶ್ರೀಯುತ ಪುನೀತ್ ಡಿ. ಶೆಟ್ಟಿ ವಹಿಸಿದರು.
ಸಂಸ್ಥೆಯಕಾರ್ಯಕ್ರಮ ಸಂಯೋಜಕಿಯಾದ ಶ್ರೀಮತಿ ರಮ್ಯಾಕಾರ್ಯಕ್ರಮವನ್ನು ನಿರೂಪಿಸಿದರು. ಹರೀಶ್ ಕುಲಶೇಖರ ಸಹಕರಿಸಿದರು.


