ಅಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ ಪೆಸೋಟ್ ತಂಙಳ್‍ರ ಪ್ರಥಮ ಸಂಸ್ಮರಣ ಸಮ್ಮೇಳನದ ಕರ್ನಾಟಕ ರಾಜ್ಯ ಮಟ್ಟದ ‘ಸಿದ್ಧತಾ ಸಮಾವೇಶ’ವು 2016ರ ಆಗಸ್ಟ್ 22ರ ಸೋಮವಾರದಂದು ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಮಂಗಳೂರು ಮಿನಿ ವಿಧಾನ ಸೌಧದ ಎಡಬದಿಯ ನೌಕರರ ಭವನದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಸಯ್ಯಿದುನಾ ಪೆಸೋಟ್ ತಂಙಳ್ (ಖ.ಸ) ಇವರ ಪ್ರಥಮ ಸಂಸ್ಮರಣ ಸಮ್ಮೇಳನದ ಅಧ್ಯಕ್ಷತೆಯನ್ನು ಸೈಯ್ಯದ್ ಅಲವಿ ತಂಙಳ್ ಅಲ್-ಹೈದ್ರೋಸಿ ಕಿನ್ಯ ಇವರು ವಹಿಸಿದ್ದರು.
ಸಯ್ಯದ್ ಸುಹೈಲ್ ತಂಙಳ್‍ರವರು ಸಿದ್ಧತಾ ಸಮಾವೇಶದ ಉದ್ಘಾಟನೆ ಮಾಡಿದರು. ಸಯ್ಯಿದ್ ಜಲಾಲುದ್ದೀನ್ ಅಲ್‍ಬುಖಾರಿ ಹಾಗೂ ಬಾಕಿಮಾರ್ ಸಅದಿ ಪೆÇಸೋಟ್ ತಂಙಳ್‍ರವರ ಪ್ರಥಮ ಸಂಸ್ಮರಣಾ ಸಮ್ಮೇಳನದ ಮಹತ್ವವನ್ನು ತಿಳಿಸಿದರು.

Siddatha Samavesha (Photo)
ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಸ್ವಾಗತಿಸಿದರು. ಎನ್.ಎಸ್. ಉಮರ್ ವಂದಿಸಿದರು. ಅಲ್ಲದೆ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಸಿದ್ಧ ಸಾದಾತುಗಳು, ಉಲಮಾ ಉಮರಾ ನೇತಾರರು, ಸಂಘಟನಾ ಪ್ರತಿನಿಧಿಗಳು ಹಾಗೂ ಎಸ್.ವೈ.ಎಸ್, ಎಸ್.ಎಮ್.ಎ, ಎಸ್.ಜೆ.ಎಮ್, ಎಸ್.ಎಸ್.ಎಫ್‍ನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು ಎಂದು ಎನ್.ಎಸ್. ಉಮರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *