ಮೂಡುಬಿದಿರೆ: ಕಡಂದಲೆ ಕಲ್ಲೋಳಿ ಫ್ರೆಂಡ್ಸ್ ಇದರ 15ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೆಸರ್ದಡೊಂಜಿ ದಿನತ ಗೊಬ್ಬುಲು ಗ್ರಾಮೀಣ ಕ್ರೀಡಾಕೂಟ ಕಡಂದಲೆ ಕಲ್ಲೋಳಿಯಲ್ಲಿ ನಡೆಯಿತು.ಜಿಲ್ಲಾ ಪಂಚಾಯಿತಿ ಸದಸ್ಯ ಸುಚರಿತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಕೃಷಿ ಚಟುವಟಿಕೆ ಅಳಿವಿನ ಅಂಚಿನಲ್ಲಿ ಇರುವಾಗ ಯುವಕರು ಕೆಸರಿನ ಕ್ರೀಡೆಯ ಜೊತೆ ಕೃಷಿಯನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಕಲ್ಲೋಳಿ ಫ್ರೆಂಡ್ಸ್‍ನ ಅಧ್ಯಕ್ಷ ಶೇಖರ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಸುಬ್ರಹ್ಮಣ್ಯ ಪ್ರೌಡ ಶಾಲಾ ನಿವೃತ್ತ ದೈಹಿಕ ಶಿಕ್ಷಕ ಸದಾಶಿವ ರೈ, ಮುರ್ತುಗುಡ್ಡೆ ಶ್ರೀಕೃಷ್ಣ ಫ್ರೆಂಡ್ಸ್‍ನ ಅಧ್ಯಕ್ಷ ಮನೋಜ್, ಸಂದೀಪ್ ಕುಮಾರ್, ಕಿರಣ್,ರಮೇಶ್ ನಾಗೇಶ್, ಸಂತೋಷ್,ನಾರಾಯಣ, ಅಶ್ವತ್, ಲತೀಶ್,ಸೂರಜ್,ಅತಿಥ್,ಪ್ರವೀಣ್,ಸತೀಶ್ ಕೀರ್ತನ್ ಮತ್ತಿತರು ಉಪಸ್ಥಿತರಿದ್ದರು.

