ಮೂಡುಬಿದಿರೆ: ಯೆನಪೊಯ ತಾಂತ್ರಿಕ ವಿದ್ಯಾಲಯದ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ `ಮಿಲನ 2016′ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಲಾಯಿತು. ಸ್ಟ್ಯಾಂಡರ್ಡ್ ಟ್ರಾನ್ಸ್‍ಫಾರ್ಮರ್ ಮಣಿಪಾಲ್ ಇದರ ಆಡಳಿತ ನಿರ್ದೇಶಕ ಡಾ.ಸದಾನಂದ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯವಾಗಿದೆ. ಪಡೆದ ಜ್ಞಾನವನ್ನು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಬಳಸಿಕೊಳ್ಳಬೇಕು ಎಂದರು.

mbd_aug21_3
ಪ್ರಾಂಶುಪಾಲ ಡಾ.ರಾಜೇಶ್ ಜಿ. ಡಿ’ಸೋಜಾ ಅಧ್ಯಕ್ಷತೆ ವಹಿಸಿ, ಶಿಕ್ಷಣವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿರುತ್ತದೆ. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.ಕಾರ್ಯಕ್ರಮ ಆಯೋಜಕ ಪ್ರೊ.ಜಿ.ಬಿ.ಪ್ರವೀಣ್ ಹಾಗೂ ಅನೂಪ್ ಉಪಸ್ಥಿತರಿದ್ದರು.

ವಿಭಾಗ ಮುಖ್ಯಸ್ಥ ಪ್ರೊ.ಪ್ರಸನ್ನ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಬೆಟ್ಟಿ ಜೋಸೆಫ್ ಮತ್ತು ಶ್ಯಾಮಿಲಿ ಕಾರ್ಯಕ್ರಮ ನಿರೂಪಿಸಿದರು. ಜೋಡ್ರಿಕ್ ಸ್ವಾಗತಿಸಿದರು. ಅವಿನಾಶ್ ಅತಿಥಿಗಳನ್ನು ಪರಿಚಯಿಸಿದರು. ಸಿಜು ಎಸ್. ವಂದಿಸಿದರು.

By suddi9

Leave a Reply

Your email address will not be published. Required fields are marked *