ಮಲ್ಪೆ: ದೇಶದಲ್ಲಿ ಬದಲಾವಣೆ ಮೂಡಲು ಯುವಕರು ಒಂದಾಗಿ ಸಂಕಲ್ಪ ಮಾಡಬೇಕಾಗಿದೆ ಎಂದು ಜೇಸಿ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.
ಅವರು ಆಗಸ್ಟ್ 20 ಶನಿವಾರ ತೆಂಕನಿಡಿಯೂರು ಸರ್ಕಾರಿ ಪ.ಪೂ ಕಾಲೇಜಿನಲ್ಲಿ ರೋಟರಿ ಕ್ಲಬ್ ಮಲ್ಪೆ ಕೊಡವೂರು ಮತ್ತು ನೆಹರು ಯುವ ಕೇಂದ್ರದ ವತಿಯಿಂದ ಕಾಲೇಜಿನಲ್ಲಿ ನಡೆದ ರಾಷ್ಟೀಯ ಸದ್ವಾವನಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ಬದಲಾವಣೆ ನಮ್ಮಿಂದ ಪ್ರಾರಂಭವಾಗಬೇಕಾಗಿದೆ ಈ ನಿಟ್ಟಿನಲ್ಲಿ ವಿಷಯಗಳನ್ನು ಅರಿತು ಕೆಲಸ ನಿರ್ವಹಿಸಬೇಕಾಗಿದೆ.ಮಾನವ ಸಂಪತ್ತು ಅತ್ಯಂತ ಶ್ರೇóಷ್ಠವಾದ ಸಂಪತ್ತು ಇದನ್ನು ಹಾಳು ಮಾಡದೆ ದೇಶದ ನಿರ್ಮಾಣದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೊಗಲಾಡಿಸಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡುವುದು ಕೇವಲ ಸರ್ಕಾರದ ಕೆಲಸವಾಗದೆ ನಮ್ಮ ಕೆಲಸವಾಗಬೇಕು ಎಂದರು.
ಅದ್ಯಕ್ಷತೆಯನ್ನು ರೋಟರಿ ಅದ್ಯಕ್ಷ ಪ್ರಭಾತ್ ಕೋಟ್ಯಾನ್ ವಹಿಸಿದ್ದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರ ಎನ್,ರೋಟರಿ ಮಾಜಿ ಉಪರಾಜ್ಯಪಾಲ ಮಹೇಶ್ ಕುಮಾರ್,ಕಾರ್ಯದರ್ಶಿ ಸುಂದರ ಪೂಜಾರಿ,ಪ್ರಜ್ಞಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸುಧೀಶ್ ಕುಮಾರ್ ತಾರನಾಥ ಮುಂತಾದವರಿದ್ದರು.
