ವಾಮಂಜೂರು :ದುಷ್ಖರ್ಮಿಗಳಿಂದ ಗಂಬೀರ ಗಾಯಗೊಂಡಿದ್ದ ರೌಡಿಶೀಟರ್ ಮೂಡುಶೆಡ್ಡೆ ನಿವಾಸಿ ಶರಣ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಶರಣ್ ತನ್ನ ಪತ್ನಿಯೊಂದಿಗೆ ಆಟೋ ರಿಕ್ಷಾದಲ್ಲಿ ಮಂಗಳೂರಿಗೆ ತೆರಳುತಿದ್ದ ಸಂದರ್ಭದಲ್ಲಿ ವಾಮಂಜೂರು ಪೆಟ್ರೋಲ್ ಪಂಪ್ ಬಳಿ ರಿಕ್ಷಾವನ್ನು ತಡೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಿಸಿ ತೀವೃ ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


