ವಿಟ್ಲ:ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ವಲಯ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ, ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಸರ್ಕಾರಿ ಆಸ್ಪತ್ರೆ ವಿಟ್ಲ ಇದರ ಸಹಯೋಗದೊಂದಿಗೆ ಉಚಿತ ನೇತ್ರ ಚಿಕಿತ್ಸಾ ಶೇವಾ ಶಿಬಿರವು ವಿಟ್ಲ ಶಾಂತಿ ನಗರದ ಅಕ್ಷಯ ಸಭಾ ಭವನದಲ್ಲಿ 16-08-2016 ರಂದು ನಡೆಯಿತು. ಈ ಕಾರ್ಯಕ್ರಮವನ್ನು ಆನಂದಾಶ್ರಮ ಸೇವಾ ಟ್ರಸ್ಟ್‍ನ ಡಾ| ಗೌರಿ ಪೈ ಉದ್ಘಾಟಿಸಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದ ಅಧ್ಯಕ್ಷ ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ನೇತ್ರಾಧಿಕಾರಿ ಶಾಂತರಾಜ್ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಲಿಂಗಪ್ಪ ಗೌಡ, ಪುತ್ತೂರು ಯುವ ರೋಟರಿ ಕ್ಲಬ್ ಅಧ್ಯಕ್ಷ ನರಸಿಂಹ ಪೈ, ಮಂಗಳೂರು ಕೆ ಎಂ ಸಿಯ ಡಾ| ಕ್ರಿಸ್ಟೀನಾ, ವೆನ್ಲಾಕ್ ಆಸ್ಪತ್ರಯ ನೇತ್ರಾಧಿಕಾರಿ ಸವಿತಾ ಕುಲಕರ್ಣಿ, ಗೋಪಾಲ ಕೃಷ್ಣ ಹಾಗೂ ಮೋಹನ ಸುವರ್ಣ ಭಾಗವಹಿಸಿದ್ದರು. ಎಸ್ ಕೆ ಪಿ ಎ ಬಂಟ್ವಾಳ ವಲಯದ ಕಾರ್ಯದರ್ಶಿ ಹರೀಶ್ ಕುಂದರ್ ಸ್ವಾಗತಿಸಿದರು. ಮೋಹನ ವಂದಿಸಿದರು. ದಯಾನಂದ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು ರಾಜೇಂದ್ರ ಸಹಕರಿಸಿದರು.
