ಮೂಡುಬಿದಿರೆ: ರಾಜ್ಯ ಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಅಭಿವೃದ್ಧಿ ಕೆಲಸಗಳ ವೀಕ್ಷಣೆಮೂಡುಬಿದಿರೆ ಅಭಿವೃದ್ಧಿ ಕೆಲಸಗಳನ್ನಶನಿವಾರ ವೀಕ್ಷಿಸಿದರು. ಕಡಲಕೆರೆ, ಮೂಡುಬಿದಿರೆ ರಿಂಗ್ ರೋಡ್, ಈಜುಕೊಳ, ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ ಹಾಗೂ ಸುವರ್ಣ ಮಹೋತ್ಸವ ಆಚರಿಸಿರುವ ಮೂಡುಬಿದಿರೆಯ ಶ್ರೀಮಹಾವೀರ ಕಾಲೇಜಿಗೆ ಭೇಟಿ ನೀಡಿದರು.
ಮಹಾವೀರ ಕಾಲೇಜಿನ ನವೀಕರಣಗೊಂಡ ಒಳಾಂಗಣ ಕ್ರೀಡಾಂಗಣ ಹಾಗೂ ಸುವರ್ಣಮಹೋತ್ಸವ ಕಟ್ಟಡವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಆಸ್ಕರ್, ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಗೊಳಿಸುವಂತೆ ಮೂಡುಬಿದಿರೆ ಶಾಸಕರು ನನ್ನ ಗಮನಕ್ಕೆ ತಂದಿದ್ದು, ಕೇಂದ್ರ ಭೂ ಸಾರಿಗೆ ಸಚಿವರಲ್ಲಿ ಈ ಕುರಿತು ಮನವಿ ಮಾಡುತ್ತೇನೆ ಎಂದರು.

ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಮಾತನಾಡಿ, ಆಸ್ಕರ್ ಫೆರ್ನಾಂಡಿಸ್ ಭೂ ಸಾರಿಗೆ ಸಚಿವರಾಗಿದ್ದ ಮಂಜೂರಾಗಿದ್ದ ಮಂಗಳೂರು-ಮೂಡುಬಿದಿರೆ-ಕಾರ್ಕಳ ಹೆದ್ದಾರಿ ವಿಸ್ತರಣೆಯ ಕುಂದುಕೊರತೆಯನ್ನು ಗಮನಕ್ಕೆ ತಂದಿದ್ದೇವೆ. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಅನುಷ್ಠಾನಗೊಳಿಸುವಂತೆ ಮಂಗಳೂರು ಸಂಸದರಲ್ಲಿಯೂ ವಿನಂತಿ ಮಾಡಿದ್ದೇವೆ ಎಂದರು.
ಮೂಡುಬಿದಿರೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಕೋಟ್ಯಾನ್, ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಅಮೀನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಸನಿಲ್ , ಕಾಂಗ್ರೆಸ್ ಮುಖಂಡರಾದ ಸಂತೋಷ್ ಶೆಟ್ಟಿ, ಅಲ್ವಿನ್ ಡಿ’ಸೋಜ, ಅನಿಸ್ ಡಿ’ಸೋಜಾ ಮೊದಲಾದವರಿದ್ದರು.


