ಮಣಿಪಾಲ: ಮಾಧವ ಪೈ ಸ್ಮಾರಕ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಆ.6 ರಂದು ಶನಿವಾರ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗಿಡಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಜೇಸಿಐ ಉಡುಪಿ ಸಿಟಿ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ವಿದ್ಯಾರ್ಥಿಗಳಿಗೆ ದೇಶದ ಸೇವೆಯನ್ನು ಮಾಡುವ ಅಪೂರ್ವ ಅವಕಾಸ ಎನ್ ಎಸ್ ಎಸ್ ನಿಂದ ಸಿಕ್ಕಿದೆ ಈ ಅವಕಾಶವನ್ನು ಉಪಯೋಗಿಸಿ ಸಾರ್ಥಕ ಜೀವನ ಸಾಗಿಸಬೇಕು ಕೇವಲ ಪಾಠದಲ್ಲಿ ಉತ್ತಮನಾದರೆ ಸಾಲದು ಈ ರೀತಿಯ ಸಾಮಾಜಿ ಚಟುವಟಿಕೆಯಲ್ಲಿ ಉತ್ತಮನಾದರೆ ಆದರ್ಶ ವಿದ್ಯಾರ್ಥಿಯಾಗಲು ಸಾದ್ಯ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ರಾಧಿಕಾ ಪೈ ಶುಭ ಹಾರೈಸಿದರು.ವೇದಿಕೆಯಲ್ಲಿ ಯೋಜನಾಧಿಕಾರಿಗಳಾದ ಪ್ರಕಾಶ್ ಭಟ್,ಅನಸೂಯ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

