ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಘಟಕ ಒಡಿಯೂರು ಗ್ರಾಮ ವಿಕಾಸ ಯೋಜನೆ ವೀರಕಂಭ ಇದರ ಸಹಯೋಗದಲ್ಲಿ ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ಮಜಿ, ವೀರಕಂಭ ಇಲ್ಲಿ ಆಟಿಡೊಂಜಿ ಕೂಟ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಂಜುಳಾ ಮಾಧವ ಮಾವೆಯವರು ಸಾಂಪ್ರಾದಾಯಿಕ ಗದ್ದೆ ಉಳುವ ಸಾಧನವಾದ ಎತ್ತುಗಳಿಗೆ, ಹೂಹಾರ ಹಾಕುವ ಮೂಲಕ ಉದ್ಘಾಟಿಸಿದರು, ಹಾಗೂ ತಮ್ಮ ಬಾಲ್ಯದ ದಿನಗಳಲ್ಲಿ ತಾವು ಗದ್ದೆಗಳಲ್ಲಿ ಆಡಿತ್ತಿದ್ದದ್ದು , ಹಾಗೂ ಕೃಷಿ ಕಾರ್ಯ ಗಳಲ್ಲಿ ತೊಡಿಕೊಳ್ಳು ತ್ತಿದ್ದನ್ನು ತಮ್ಮ ಮಾತಿನಲ್ಲಿ ತಿಳಿಸಿದರು. ರೈತನು ದೇಶದ ಬೆನ್ನೆಲುಬು, ರೈತನು ಸಂತೋಷವಾಗಿರುವಾಗ ಮಾತ್ರ ದೇಶವು ಸುಭಿಕ್ಷವಾಗಿರಲು ಸಾಧ್ಯವಾಗಿರುತ್ತದೆ. ಮಕ್ಕಳನ್ನು ಬಾಲ್ಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಆಸಕ್ತಿ ಬೆಳೆಯುತ್ತದೆ. ನಾವು ತಿನ್ನುವ ಆಹಾರದ ಒಂದೊಂದು ಅಗುಳಿಗೂ ಮಹತ್ವವಿದೆ. ಅನ್ನದಾತನ ಶ್ರಮವಿದೆ. ಬಾಲ್ಯದಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ತಾವು ಒಬ್ಬ ಉತ್ತಮ ಕೃಷಿಕನಾಗುವಲ್ಲಿ ಸಂದೇಹವಿಲ್ಲ. ಹಾಗೂ ಅನ್ನದಾತನ ಬಗ್ಗೆ ಗೌರವ ಭಾವನೆ ಬೆಳೆಯುತ್ತದೆ. ಎಂಬುದಾಗಿ ತಮ್ಮ ಉದ್ಘಾಟನಾ ಮಾತುಗಳಲ್ಲಿ ತಿಳಿಸಿದರು. ಮುಖ್ಯ ಅತಿಥಿ ಯಾಗಿದ್ದ ತಾಲೂಕು ಪಂಚಾಯತ್ ಮಾಜಿಸದಸ್ಯರಾಗಿದ್ದ ಶ್ರೀಯುತ ಮಾಧವ ಮಾವೆ ಯವರು ಕೃಷಿಯು ಬದುಕಿನ ಕೈ ಹಿಡಿಯುತ್ತದೆ. ಇದರ ಪ್ರಗತಿಯಿಂದ ದೇಶದ ಪ್ರಗತಿ ಸಾಧ್ಯ. ಹಳ್ಳಗಳಲ್ಲಿ ಬಳಸುವ ಪ್ರಕೃತಿದತ್ತ ಆಹಾರ ಗಳು , ಕೇವಲ ದೈಹಿಕ ದೃಢತೆ ಮಾತ್ರವಲ್ಲದೆ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಪರಿಸರದೊಂದಿಗೆ ನಾವು ಸ್ನೇಹ ಸಂಬಂಧವನ್ನು ಹೊಂದಿದಾಗ ಆರೋಗ್ಯಯುತ ವಾಗಿ ಬೆಳೆಯಲು ಸಾಧ್ಯ ಎಂದರು.

ಒಡಿಯೂರು ಗ್ರಾಮ ವಿಕಾಸ ಯೋಜನೆ ವೀರಕಂಭ ಇದರ ಮೇಲ್ವಿಚಾರಕರಾದ ಶ್ರೀಯುತ ಸದಾಶಿವ ಅಳಿಕೆ ಇವರು ಪರಿಸರದಲ್ಲಿ ಹೊಂದಾಣಕೆ ಮಾಡಿಕೊಂಡು ಬಾಳುವುದು ನಮ್ಮ ಧರ್ಮ, ನಿಸರ್ಗದತ್ತವಾಗಿ ನಾವು ನಡೆದುಕೊಂಡಾಗ ಅದು ನಮ್ಮಲ್ಲಿ ಚೈತನ್ಯ ವನ್ನು ಬಿತ್ತುತ್ತದೆ. ಆಟಿ ತಿಂಗಳಲ್ಲಿನ ಆಹಾರ ಬಳಕೆಯು ನಮಗೆ ನಿಸರ್ಗದತ್ತ ವಾದ ಕೊಡುಗೆಯಾಗಿದೆ. ಶ್ರಮದಿಂದ ಮುಂದಿನ ಸುಖೀ ದಿನಗಳನ್ನು ಕಾಣಲು ಸಾಧ್ಯ ಎಂದು ತಿಳಿಸಿದರು. ಇನ್ನೋರ್ವ ಅತಿಥಿಯಾದ ಪ್ರಗತಿಪರ ಕೃಷಿಕರಾದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿವೃತ್ತ ಮ್ಯಾನೇಜರ್ರವರಾದ ಶ್ರೀಯುತ ಉಗ್ಗಪ್ಪ ಶೆಟ್ಟಿ ಯವರು ಪರಿಸರ ನಾಶವಾಗಿ ಕಾಂಕ್ರಿಟೀಕರಣವಾಗಿದೆ. ನಮ್ಮ ನಾಶಕ್ಕೆ ನಾವೇ ದಾರಿ ಮಾಡಿಕೊಂಡಿರುವುದು ವಿಪರ್ಯಾಸವಾಗಿದೆ. ರೈತನು ತಾವು ಬದುಕುವುದರ ಜೊತೆ ತನ್ನ ಪರಿಸರವನ್ನು ಬದುಕಿಸುತ್ತಾನೆ. ನಾವು ತಿನ್ನುವ ಆಹಾರದ ಹಿಂದೆ ಆತನ ಶ್ರಮವಿದೆ. ಆತನಂತೆ ನಾವು ಪರಿಸರವನ್ನು ಪ್ರೀತಿಸಿದಾಗ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಯುತ ನಾರಾಯಣ ಗೌಡ ಇವರು ವಿದ್ಯಾರ್ಥಿಗಳಿಗೆ ತರಗತಿ ಕೋಣೆಯೊಳಗೆ ಕಲಿತ ಕಲಿವಿನ ಜೊತೆಗೆ ಪ್ರಕೃತಿಯ ಮಡಿಲಿಗೆ ಕರೆದುಕೊಂಡು ನೋಡಿ ತಿಳಿ ಮಾಡಿ ಕಲಿ ಎಂಬ ಮಾತಿನಂತೆ ಶಿಕ್ಷಣವನ್ನು ನೀಡಿದಾಗ ಹೆಚ್ಚು ಅರ್ಥ ಪೂರ್ಣವಾಗಿರುತ್ತದೆ. ಆಷಾಢ, ಶ್ರಾವಣ ಮುಂತಾಗಿ ಪ್ರತ್ಯೇಕ ವಾದ ಆಹಾರವನ್ನು ಬಳಸುವುದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಸಂಪ್ರದಾಯಬದ್ಧ ಆಹಾರವು ಇಂದಿನ ಜಂಕ್ ಫುಡ್ ಗಳ ಎದುರು ಮರೆಯಾಗಿಸಿ ಅನಾರೋಗ್ಯಕ್ಕೆ ಎಡೆ ಮಾಡುತ್ತಿದೆ. ಎಂದರು.
ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮಲತಾ ರವರು ಆಷಾಢ ಮಾಸದಲ್ಲಿತಿನ್ನುವ ತಿನಿಸು ಗಳು ಹಾಗೂ ನಾವು ತೆಗೆದುಕೊಳ್ಳ ಬೇಕಾದ ಆರೋಗ್ಯದ ಮುತುವರ್ಜಿ ಕುರಿತು ತಿಳಿಸಿದರು. ತಾಲೂಕು ಪಂಚಾಯತ್ ಸದಸ್ಯೆಯಾದ ಗೀತಾ ಚಂದ್ರ್ರ ಶೇಖರ್ ರವರು ದೇಶದ ಪ್ರಗತಿಯೇ ಕೃಷಿಯ ಪ್ರಗತಿಯಾಗಬೇಕು. ಮಕ್ಕಳಿಗೆ ಬಾಲ್ಯದಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬೆಳಸುವುದು ಆರೋಗ್ಯಕರ ಹವ್ಯಾಸವಾಗಿದೆ ಎಂದರು
ಕಾರ್ಯಕ್ರಮದಲ್ಲಿ ಮಾವೆ ದಂಪತಿಯರಿಂದ ಹಾಗೂ ಅತಿಥಿ ಗಳಿಂದ ಗದ್ದೆಗೆ ವೀಳ್ಯ ಬಿಡುವ ಮೂಲಕ ಚಾಲನೆ ನೀಡಿದರು ಮೊದಲು ಸಾಂಪ್ರಾದಾಯಿಕ ಉಳುವ ಕ್ರಮದಲ್ಲಿ ಮೈರಾದ ಶ್ರೀಯುತ ರುಕ್ಮಯ್ಯ ಮೈರಾರವರು ತಮ್ಮ ಎತ್ತುಗಳ ಮೂಲಕ ಹಾಗೂ ಶ್ರೀನಿವಾಸ ಕೇಪುಳ ಕೋಡಿಯವರು ವೈಜ್ಞಾನಿಕ ವಿಧಾನವಾದ ಟಿಲ್ಲರ್ ಯಂತ್ರದ ಮೂಲಕ ಗದ್ದೆ ಉಳುವ ಮೂಲಕ ತಿಳಿಸಿ ಕೊಟ್ಟರು. ಪ್ರಾರಂಭ ದಲ್ಲಿ ಮಕ್ಕಳಿಗೆ ಹಳೆಯ ವಿಧಾನವಾದ ತೆಪ್ಪಂಗಾಯಿ , ಹಾಳೆಯಲ್ಲಿ ಎಳೆಯುವುದು, ನಿಧಿ ಶೋಧನೆ ಮುಂತಾದ ಆಟಗಳನ್ನು ಆಡಿಸಲಾಯಿತು. ಶಿಕ್ಷಕರು ವಿದ್ಯಾರ್ಥಿ ಗಳೊಂದಿಗೆ ಆಟವಾಡಿ ತಾವು ಮಕ್ಕಳಾದರು.
ನಂತರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು , ಒಡಿಯೂರು ಗ್ರಾಮ ವಿಕಾಸ ಯೋಜನೆ ವೀರಕಂಭ ಇದರ ಸದಸ್ಯರು ಪೋಷಕರು ಹಾಗೂ ಮಕ್ಕಳು ತಂದಿರುವ ಆಷಾಢ ಮಾಸದ ತಿನಿಸುಗಳನ್ನು ಪರಿಚಯಿಸಲಾಯಿತು. ಪತ್ರೊಡೆ ಹಾಗೂ ಪಾನಕ ಸವಿದು ಶ್ರೀಮತಿ ಗೀತಾರವರು ಒಬೇಲೆ ಹಾಡಿನ ಹುಮ್ಮಸ್ಸಿಗೆ ಕ್ಷಣಾರ್ಧದಲ್ಲಿ ಬಂದಿರುವ ಎಲ್ಲರೂ ನೇಜಿ ನೆಟ್ಟು ಮುಗಿಸಿದರು.ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಿಶಾಂತ್ ರೈ, ಸದಸ್ಯರಾದ ಜನಾರ್ಧನ ಪೂಜಾರಿ ರಾಮಚಂದ್ರ ಪ್ರಭು , ಜಯಂತಿ, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯಾಧ್ಯಕ್ಷರಾದ ಸೋಮಶೇಖರ್ ವೀರಕಂಭ ಘಟಕದ ಸೇವಾಪ್ರತಿನಿಧಿ ಗಿರಿಜಾ , ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂಜೀವ ಮೂಲ್ಯ ಹಾಗೂ ಸದಸ್ಯರು ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ದಿನೇಶ್ ಹಾಗೂ ಸದಸ್ಯರು , ಕಾರ್ಯಕ್ರಮದ ಮುಖ್ಯ ರೂವಾರಿಯಾದ ಎಸ್.ಕೆ.ಪಿಯ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರಾ ಗದ್ದೆಯನ್ನು ದತ್ತು ನೀಡಿದ ಇಬ್ರಾಹಿಂ ರವರು ಭಾಗವಹಿಸಿದ್ದರು.
ಶಿಕ್ಷಕಿ ಶಕುಂತಲಾ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಸಂಗೀತಾಶರ್ಮ ಧನ್ಯವಾದ ವಿತ್ತರು. ಶಿಕ್ಷಕಿಯರಾದ ಸಿಸಿಲಿಯಾ , ಹಾಗೂ ಜ್ಯೋತಿ ಸಹಕರಿಸಿದರು.

