ಬಂಟ್ವಾಳ: ಬಂಟ್ವಾಳ ಪೇಟೆಯ ಪ್ರಮುಖ ದೇವಸ್ಥಾನಗಳಾದ ಚಂಡಿಕಪರಮೇಶ್ವರಿ ದೇವಿ ದೇವಸ್ಥಾನ, ಬಿಸಿರೋಡಿನ ರಕ್ತೇಶ್ವರೀ ದೇವಿ ದೇವಸ್ಥಾನ ಮತ್ತು ಪೋಲೀಸ್ ಲೈನ್‍ನ ಅನ್ನಪೂರ್ಣೇಶ್ವರೀ ದೇವಿ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ನಾಗದೇವರ ಗುಡಿಯಲ್ಲಿ ನೂರಾರು ಭಕ್ತರಿಂದ ಹಾಲಾಭಿಷೇಕ, ತಂಬಿಲ ಸೇವೆ ನಡೆಯಿತು . ಭಕ್ತರು ಹಿಂಗಾರ, ಸೀಯಾಳ ಮತ್ತು ಹಾಲಿನ ಅಭಿಷೇಕ ಮಾಡುವ ಮೂಲಕ ನಾಗರಪಂಚಮಿಯ ಆರಾಧನೆಯನ್ನು ಶೃದ್ದಾ ಭಕ್ತಿಯಿಂದ ಮಾಡಿದರು. Chandikaparameshwari temple  naga (1)

Chandikaparameshwari temple  naga (3)

annapoorneshwari teple police line (1)

annapoorneshwari teple police line (2)

annapoorneshwari teple police line (7)ಬೆಳಿಗ್ಗೆಯಿಂದಲೇ ಬಿಸಿರೋಡಿನ ಪೇಟೆ ಜನಜಂಗುಲಿಯಿಂದ ಕೂಡಿತ್ತು. ಮಳೆರಾಯನ ಕೃಫೆ ಕೂಡಾ ಜನರ ಓಡಾಟಕ್ಕೆ ಅನುಕೂಲವಾಯಿತು.ಪಣೋಲಿಬೈಲು ಶ್ರೀ ಕಲ್ಲುರ್ಟಿ ಕ್ಷೇತ್ರದಲ್ಲಿ ಆ. 7ರಂದು ನಾಗರಪಂಚಮಿ ಪ್ರಯುಕ್ತ ನಾಗದೇವರ ಗುಡಿಯಲ್ಲಿ ನೂರಾರು ಭಕ್ತರಿಂದ ಹಾಲಾಭಿಷೇಕ, ತಂಬಿಲ ಸೇವೆ ನಡೆಯಿತು. ಆಡಳಿತಾ„ಕಾರಿ ಹರಿಶ್ಚಂದ್ರ, ಪ್ರಮುಖರಾದ ಬಾಬು ಮೂಲ್ಯ, ರಮೇಶ ಮೂಲ್ಯ, ಮೋನಪ್ಪ ಮೂಲ್ಯರ ಉಪಸ್ಥಿತಿಯಲ್ಲಿ ಪರ್ವಸೇವಾ ಕಾರ್ಯಗಳು ನಡೆದವು.

By suddi9

Leave a Reply

Your email address will not be published. Required fields are marked *