ಬಂಟ್ವಾಳ : ಆಟಿ ತಿಂಗ ಳು ತುಂ ಬಾ ಕಠಿಣ ತಿಂಗ ಳು . ಆ ತಿಂಗ ಳು ಜನ ಕಷ್ಟದಿಂದ ಜೀವನ ಮಾಡುವ ದಿನ ಇತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕೆಲವು ಸಮಾಜಮುಖಿ ಸುಧಾರಣೆ ಮೂಲಕ ಇಂದು ಇಲ್ಲದಾಗಿದೆ. ಹಿಂದಿನ ಹಿರಿಯರ ಬದುಕನ್ನು ತಿಳಿದರೆ ಮಾತ್ರ ನಾವು ಇಂದು ಬದುಕು ಕಟ್ಟಲು ಸಾಧ್ಯ ಎಂದು ಅರಣ್ಯ ಪರಿಸರ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನುಡಿದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪಲ್ಲಮಜಲು ಇಲ್ಲಿ ನಡೆದ ಆಟಿಡೊಂಜಿ ಕೂಟದ ಕಾರ್ಯಕ್ರಮ ವನ್ನು ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿದರು.

KAR_9534

KAR_9538 ಹೆಣ್ಣಿನ ಜೀವನಕ್ಕೆ ಹಾಗೂ ಬರುವ ಪೀಳಿಗೆಗೆ ಬದುಕು ಕಟ್ಟಿ ಕೊಡುವುದೇ ಆಟಿ ತಿಂಗ ಳಿನ ಮಹತ್ವ ಎಂದು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮೊಡಂಕಾಪು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ , ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಆಶ್ರಯ ಸಮಿತಿ ಸದಸ್ಯ ಸಂಜೀವ ಬಂಜನ್, ಪುರಸಭಾ ಸದಸ್ಯರಾದ ಪ್ರಭಾ ಸಾಲ್ಯಾನ್, ಮಹಮ್ಮದ್ ಶರೀಫ್, ಚೌಟ ಇಂಡೇನ್ ಗ್ಯಾಸ ಮಾಲಕ ಜಗನ್ನಾಥ್ ಚೌಟ , ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್,ಲಯನ್ಸ್ ಸೇವಾ ಸಮಿತಿ ಸದಸ್ಯೆ ಪ್ರತಿಭಾ ಪಿ.ಶೆಟ್ಟಿ, ರಾಮಾಂಜನೇಯ ಭಜನಾ ಮಂದಿರ ಅಧ್ಯಕ್ಷ ಸೇಸಪ್ಪ ದಾಸಯ್ಯ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ಸದಸ್ಯ ಅಹ್ಮದ್ ಬಾವಾ , ಪುಷ್ಪರಾಜ ಶೆಟ್ಟಿ ಪಲ್ಲಮಜಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿದಿ ಗಳಾದ ನಂದಿನಿ, ಸುಜಾತಾ ಉಪಸ್ಥಿತರಿದ್ದರು.
ಶಿಕ್ಷಕ ಪುಟ್ಟರಂಗನಾಥ ಸ್ವಾಗತಿಸಿದರು. ಶಿಕ್ಷಕಿ ಲೀನಾ ಡಿಸೋಜ ವಂದಿಸಿ, ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *