ಮೂಡುಬಿದರೆ: ಪುಚ್ಚೆಮೊಗರು ಗ್ರಾಮದ ಸಂಗಾಡಿಬೈಲು ಎಂಬಲ್ಲಿ ಮಂಗಳವಾರ ಬಿದ್ದ ಮಳೆಗೆ ಕಾಲು ಸಂಕ ಕುಸಿದು ಎರಡು ಗ್ರಾಮಗಳ ಜನ ಸಂಚಾರಕ್ಕೆ ತೊಂದರೆ ಆಗಿದೆ.ಇರುವೈಲು-ಪುಚ್ಚೆಮೊಗರು ಗ್ರಾಮದ ಪಟೇಲರಾಗಿದ್ದ ಐ.ಡಿ ತ್ಯಾಂಪಣ್ಣ ಶೆಟ್ಟಿ ಪರಿಶ್ರಮದಲ್ಲಿ ಸುಮಾರು 50 ವರ್ಷದ ಹಿಂದೆ ಬಾವದಬೈಲು ತಾಕೋಡೆ ನಡುವಿನ ಸಂಗಾಡಿಬೈಲು ಎಂಬಲ್ಲಿ ಈ ಕಾಲುಸಂಕ ನಿಮರ್ಿಸಲಾಗಿತ್ತು.

mbd_june11_4 (5)

ಕೊನ್ನೆಪದವು ಇರುವೈಲಿಗೆ ಹೋಗುವ ಸಾರ್ವಜನಿಕರಿಗೆ, ನಿತ್ಯಾನಂದ ಶಾಲೆಗೆ ಹೋಗುವ ಮಕ್ಕಳಿಗೆ ಈ ಕಾಲುಸಂಕ ಪ್ರಮುಖ        mbd_june11_4 (2)ಕೊಂಡಿಯಾಗಿತ್ತು. ಸ್ಥಳಿಯ ಕುಂಭಕಂಠಿಣಿ ದೈವಷ್ಥಾನದ ವಾಷರ್ಿಕ ಜಾತ್ರೆ ಸಂದರ್ಭ ದೈವಗಳ ಭಂಡಾರ ಭಂಡಾರ ತರುವುದು ಕೂಡ ಇದೇ ಕಾಲುಸಂಕ ದಾರಿ ಮೂಲಕಮಂಗಳವಾರ ರಾತ್ರಿ ಸುರಿದ ಮಳೆಗೆ ಕಾಲು ಸಂಕ ಕುಸಿದು ಬಿದ್ದು ಬುಧವಾರದಿಂದ ಎರಡು ಗ್ರಾಮಗಳ ಸಂಪರ್ಕ ಕೊಂಡಿ ಕಡಿದು ಹೋಗಿದ್ದು ಸಾರ್ವಜನಿಕರು ಶಾಲಾ ಮಕ್ಕಳು ದೂರದ ಪರ್ಯಾಯ ದಾರಿಯನ್ನು ಅವಲಂಬಿಸಬೇಕಾಗಿದೆ. ಕಾಲುಸಂಕ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಗ್ಗೆ ಈ ಹಿಂದೆ ಹೊಸಬೆಟ್ಟು ಪಂಚಾಯಿತಿ, ಸ್ಥಳಿಯ ಶಾಸಕರಿಗೆ ಮನವಿ ಮಾಡಿ ಹೊಸ ಕಾಲುಸಂಕ ನಿಮರ್ಾಣಕ್ಕೆ ಒತ್ತಾಯಿಸಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಈಗ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಕುರಿತು ಸ್ಥಳೀಯ ಪಂಚಾಯತ್ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತಂದು ತುತರ್ು ನೆಲೆಯಲ್ಲಿ ಕಾಲುಸಂಕ ರಚನೆಗೆ ಮನವಿ ಮಾಡಲಾಗುವುದು ಎಂದು ಸ್ಥಳಿಯ ನಿವಾಸಿ, ವಕೀಲ ವರದರಾಜ ಅಡ್ಯಂತಾಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *