ಮಂಗಳೂರು:ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದಆಗಸ್ಟ್ 11ನೇ ಗುರುವಾರ ನಗರದಡಾನ್‍ ಬಾಸ್ಕೋ ಹಾಲ್‍ನಲ್ಲಿಜಗಲಿರುವ ಶೇಣಿ ಸಂಸ್ಮರಣೆಕಲೋತ್ಸವ ಸಮಾರಂಭದಲ್ಲಿಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದಕಾರಂತರಿಗೆ ಶೇಣಿಕಲೋತ್ಸವ ಪ್ರಶಸ್ತಿ ನೀಡಿಗೌರವಿಸಲಾಗುವುದು. ಯಕ್ಷಗಾನ ವಾಚಸ್ಪತಿ ಪೊಳಲಿ ಶಂಕರನಾರಾಯಣ ಶಾಸ್ತ್ರಿ ಹಾಗೂ ಗೌರಮ್ಮ ದಂಪತಿಗಳ ಸುಪುತ್ರ ನಿತ್ಯಾನಂದಕಾರಂತರು ಸುಪ್ರಸಿದ್ಧ ತುಳು ಯಕ್ಷಗಾನ ಪ್ರಸಂಗಗಳಾದ ಸತ್ಯದಪ್ಪೆಚೆನ್ನಮ್ಮ, ನಾಡಕೇದಗೆ, ಧರ್ಮಧಾರೆ, ಪಣಂಬೂರುಕ್ಷೇತ್ರ ಮಹಾತ್ಮೆ, ದಂಡಕಾರಣ್ಯ ಮುಂತಾದ 20 ಪ್ರಸಂಗಗಳನ್ನು ರಚಿಸಿದ್ದಾರೆ.

karanthಹವ್ಯಾಸಿ ಯಕ್ಷಗಾನಅರ್ಥಧಾರಿಯಾಗಿ, ಕಲಾವಿದರಾಗಿ,  ಬರಹಗಾರನಾಗಿ ಚಿರಪರಿಚಿತರಾಗಿರುವ  ಕಾರಂತರು ಜಿಲ್ಲಾ ಮಟ್ಟದ ರಾಜ್ಯೋತ್ಸವ  ಪ್ರಶಸ್ತಿಗೂ ಪಾತ್ರರಾಗಿರುವರು. ತೆಂಕುತಿಟ್ಟಿನ ಪ್ರಸಿದ್ಧ  ಕಲಾವಿದರ ತಂಡವನ್ನು ಐತಾಳರ ಜೊತೆಗೂಡಿ ಪ್ರಪ್ರಥಮ ಬಾರಿಗೆದುಬಾೈ, ಅಬುದಾಬಿಗೆಕರೆದೊಯ್ದಿರುವ ನಿತ್ಯಾನಂದಕಾರಂತರುಅರ್ಹವಾಗಿಯೇ  ಅನೇಕ ಸನ್ಮಾನಗಳಿಗೆ  ಪಾತ್ರರಾಗಿದ್ದಾರೆ. ದುಬಾೈಕನ್ನಡ ಸಂಘದಿಂದ, ಅಮೇರಿಕಾದ ಡೆಟ್ರೋಯ್ಡ್‍ನ ಕನ್ನಡ ಸಂಘದಿಂದ,ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಮಂಗಳೂರು ತಾಲೂಕು ಸಮ್ಮೇಳನದಲ್ಲೂ ಸನ್ಮಾನಿತರಾಗಿದ್ದಾರೆ. ಅಗಸ್ಟ್ 11, ಗುರುವಾರ ಸಂಜೆ 5ಕ್ಕೆ ಮಂಗಳೂರು ಡಾನ್‍ಬಾಸ್ಕೋ ಹಾಲ್‍ನಲ್ಲಿ ಶೇಣಿ ಸಂಸ್ಮರಣೆ – ಶೇಣಿಕಲೋತ್ಸವ ಪುರಸ್ಕಾರ–ಯಕ್ಷಗಾನ ಬಯಲಾಟಜರಗಲಿರುವುದೆಂದುಕಲ್ಕೂರ ಪ್ರತಿಷ್ಠಾನದಅಧ್ಯಕ್ಷ   ಶ್ರೀ ಎಸ್. ಪ್ರದೀಪಕುಮಾರಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿರುವರು.

 

By suddi9

Leave a Reply

Your email address will not be published. Required fields are marked *