ಮೂಡುಬಿದಿರೆ: ಶಾಸ್ತ್ರೋಕ್ತವಾಗಿ ತಯಾರಿಸಿದ ರೋಗನಿರೋಧಕ, ಪಾರಂಪರಿಕ ದಿವ್ಯೌಷಧ `ಆಟಿ ಕಷಾಯ’ವನ್ನು ವಿದ್ಯಾಗಿರಿಯ ¸ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ವಿತರಿಸಲಾಯಿತು.
ಧನ್ವಂತರಿ ಪ್ರಾರ್ಥನೆಯ ಬಳಿಕ ಕಾಲೇಜಿನ ಪ್ರಾಂಶುಪಾಲ ಡಾ.ವಿನಯಚಂದ್ರ ಶೆಟ್ಟಿ ಕಷಾಯವನ್ನು ವಿತರಿಸುವುದರ ಮೂಲಕ ಚಾಲನೆ ನೀಡಿದರು. ಆಷಾಡ ತಿಂಗಳಲ್ಲಿ ರೋಗರುಜಿನಗಳು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಪಾರಂಪರಿಕವಾದ ಈ ಕಷಾಯವನ್ನು ಕುಡಿಯುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರ ಪ್ರಭಾವ ವರ್ಷ ಪೂರ್ತಿ ಇರುವುದು ವಿಶೇಷತೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದಕ್ಕೆ ಹೆಚ್ಚಿನ ಪ್ರಾಧನ್ಯತೆ ನೀಡಲಾಗಿದೆ ಎಂದು ಹೇಳಿದರು.2mood 1 (2)

2mood 1 (1)

ದ್ರವ್ಯಗುಣ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಸುಬ್ರಹ್ಮಣ್ಯ ಪದ್ಯಾಣ, ಉಪನ್ಯಾಸಕರಾದ ಡಾ.ರವಿರಾಜ್, ಡಾ.ಶ್ರೀದೇವಿ, ಡಾ.ಆಶಾ ಮೊದಲಾದವರಿದ್ದರು. ಡಾ. ಅನೂಪ್ ಕಾರ್ಯಕ್ರಮ ನಿರ್ವಹಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 3 ಸಾವಿರ ಮಂದಿ ಕಷಾಯ ಕುಡಿದರು.

By Suddi9

Leave a Reply

Your email address will not be published. Required fields are marked *