ಬಂಟ್ವಾಳ :ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ ,ವಿಶೇಷ ಉತ್ಸವ ಜರಗಿತು.ಸಾವಿರಾರು ಭಕ್ತಾದಿಗಳು ಆಗಮಿಸಿ ಇಲ್ಲಿನ ಗದಾತೀರ್ಥ , ಉಂಗುಷ್ಠ ತೀರ್ಥ ಹಾಗೂ ಜಾನು ತೀರ್ಥಗಳೆಂಬ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಬಾಗೀನ ಅರ್ಪಿಸಿದರು. ಬಳಿಕ ಶ್ರೀ ಪಾರ್ವತೀ-ಪರಮೇಶ್ವರರನ್ನು ದರ್ಶಿಸಿ ಪ್ರಸಾದ ಸ್ವೀಕರಿಸಿದರು.ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಪ್ರ.ಅರ್ಚಕ ನಟರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರಗಿದವು.
9 (2)

10 (1)

15

17 (1)

11 (1)

13 (1)

2btl-Jana (1)ಮುಂಜಾನೆ ಸುಮಾರು 3 ಗಂಟೆಯಿಂದ ದೇವರ ದರ್ಶನಕ್ಕೆ ಭಕ್ತರು ಆಗಮಿಸಿದ್ದಾರೆ.ಮಳೆ ಬಿಟ್ಟ ಕಾರಣ ದೂರದ ಊರುಗಳಿಂದ ಭಕ್ತರು ಆಗಮಿಸುತ್ತಿರುವುದು ಕಂಡು ಬಂತು. ವಗ್ಗದಿಂದ ಕಾರಿಂಜಕ್ಕೆ ರಸ್ತೆ ಕಿರಿದಾಗಿದ್ದು ವಾಹನ ದಟ್ಟಣೆ ಜಾಸ್ತಿಯಾಗಿತ್ತು.ಆದರೆ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಂಗಳೂರು,ಬಂಟ್ವಾಳ ಗ್ರಾಮಾಂತರ,ನಗರ,ಟ್ರಾಫಿಕ್,ಪುಂಜಾಲಕಟ್ಟೆ,ವಿಟ್ಲ,ಬೆಳ್ತಂಗಡಿ,ಧರ್ಮಸ್ಥಳ ಪೆÇಲೀಸ್ ಠಾಣೆಗಳ ಪೆÇಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆಗೊಳಿಸಿದರು.ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ನೂಕು ನುಗ್ಗಲಾಗದಂತೆ ಭಕ್ತಾ„ಗಳಿಗೆ ದೇವರ ದರ್ಶನ ಸುಲಭಗೊಳಿಸಲು ಸರತಿ ಸಾಲಿನ ವ್ಯವಸ್ಥೆಗೊಳಿಸಿದ್ದರು.ಆಡಳಿತಾ„ಕಾರಿ,ಕಾವಳಮೂಡೂರು ಪಂ.ಅ.ಅ„ಕಾರಿ ವೇದವ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸದಾಶಿವ ಪ್ರಭು, ಪಿ.ವಿಶ್ವನಾಥ ಪೂಜಾರಿ, ಕೃಷ್ಣಪ್ಪ ಗೌಡ, ಜನಾರ್ಧನ ಆಚಾರ್ಯ, ವೆಂಕಪ್ಪ ನಾಯ, ಸುಜಲ ವಿ.ಶೆಟ್ಟಿ, ಸವಿತಾ ಚಂದ್ರಶೇಖರ ಮತ್ತು ಸಿಬಂದಿಗಳು ಸಹಕರಿಸಿದ್ದರು. ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ತಾ.ಪಂ.ಸ್ಥಾಯಿ ಸಮತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ ಮತ್ತಿತರ ಗಣ್ಯರು ಆಗಮಿಸಿದ್ದರು.

ಆರೋಗ್ಯ ಸಮೃದ್ಧಿ ಸಾರುವ ಆಟಿ ಅಮಾವಾಸ್ಯೆಗೆ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಊರು-ಪರವೂರುಗಳಿಂದ ತೀರ್ಥಸ್ನಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು ಅವರಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಸ್ತುತ 90 ಲ.ರೂ.ವೆಚ್ಚದಲ್ಲಿ ಪಾರ್ವತಿ ದೇವಸ್ಥಾನದ ಸುತ್ತು ಪೌಳಿ ಗೋಪುರ ನಿರ್ಮಾಣಗೊಳ್ಳುತ್ತಿದೆ.
-ಪಿ.ಜಿನರಾಜ ಆರಿಗ,ಅಧ್ಯಕ್ಷರು,ವ್ಯವಸ್ಥಾಪನಾ ಸಮಿತಿ

ಚಿತ್ರ:ಕಿಶೋರ್

By suddi9

Leave a Reply

Your email address will not be published. Required fields are marked *