ವಿಟ್ಲ:ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಆಶ್ರಯದಲ್ಲಿ ಬಾಲಗೋಕುಲ ತರಗತಿಯನ್ನು ನಡೆಸುವವರ ಪ್ರಶಿಕ್ಷಣ ವರ್ಗವನ್ನು ವಿಟ್ಲದ ಶ್ರೀ ಭಗವತಿ ದೇವಸ್ಥಾನದಲ್ಲಿ ಆಯೋಜಿಸಲಾಯಿತು. ದೇವಸ್ಥಾನದ ವ್ಯವಸ್ಥಾಪಕ ಕೇಶ್ ವಿ ಆರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
A1
ತಾಲೂಕು ಸೇವಾ ಪ್ರಮುಖ ಗೋಪಾಲ ಕಲ್ಲಡ್ಕ ಪ್ರಶಿಕ್ಷಣ ನಡೆಸಿಕೊಟ್ಟರು. ದೇವಸ್ಥಾನದ ಮೋನಪ್ಪ ಗುರುಸ್ವಾಮಿ, ಭಾರತ್ ಶಾಮಿಯಾನಾದ ಸಂಜೀವ ಪೂಜಾರಿ, ಬಾಲಗೋಕುಲ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಟ್ಲ ನಗರ ಸಹಕಾರ್ಯವಾಹ ಗೋವರ್ಧನ ವಿಟ್ಲ ಉಪಸ್ಥಿತರಿದ್ದರು. ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು ಪ್ರಸ್ತಾವಿಸಿದರು. ಬಾಲಗೋಕುಲ ಸಮಿತಿ ಕಾರ್ಯದರ್ಶಿ ಪದ್ಮನಾಭ ಕಟ್ಟೆ ಸ್ವಾಗತಿಸಿದರು. ಪರಮೇಶ್ವರ ಆಚಾರ್ಯ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *