ವಿಟ್ಲ :ಜೇಸಿಐ ವತಿಯಿಂದ ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದೊಂದಿಗೆ `ಓದಿನಲ್ಲಿ ಏಕಾಗ್ರತೆ’ ಎಂಬ ತರಬೇತಿ ಮತ್ತು `ಜನತಾ ದರ್ಪಣ’ ವಿದ್ಯಾರ್ಥಿ ಪ್ರತಿಭಾ ಅನಾವರಣ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮವನ್ನು ವದ್ಯಾ ಸಂಸ್ಥೆಯ ಸಂಚಾಲಕಿ ಡಾ| ಅಶ್ವಿನಿ ಕೃಷ್ಣಮೂರ್ತಿ ಉದ್ಘಾಟಿಸಿ ಹಸ್ತಪ್ರತಿ ಬಿಡುಗಡೆಗೊಳಿಸಿದರು.B1

ಸಂಪನ್ಮೂಲ ವ್ಯಕ್ತಿ ವಲಯ ಹದಿನೈದರ ನಿಕಟ ಪೂರ್ವ ಅಧ್ಯಕ್ಷ ಕೃಷ್ಣ ಮೋಹನ್ ಪಿ ಎಸ್ ತಬೇತಿ ನೀಡಿದರು. ಕಾಲೀಜಿನ ಪ್ರಾಂಶುಪಾಲ ಡಿ ಶ್ರೀನಿವಾಸ್ ಪ್ರಸ್ತಾವಿಸಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಸುರೇಶ್ ವಂದಿಸಿದರು. ವಿದ್ಯಾರ್ಥಿನಿ ಅನನ್ಯ ನಿರೂಪಿಸಿದರು. ಇಂಗ್ಲೀಷ್ ಉಪನ್ಯಾಸಕಿ ಜಯಶ್ರೀ ಕೆ ಆರ್ ಸಹಕರಿಸಿದರು. ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೊಪ್ಪಳ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಸದಸ್ಯ ಸೋಮಶೇಖರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *