ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ, ಮಹಿಳಾ ಸಂಘ ಮತ್ತು ಯುವ ವೇದಿಕೆಯ ಆಶ್ರಯದಲ್ಲಿ “ಆಟಿಡೊಂಜಿ ಕೂಟ ‘ ಕಾರ್ಯಕ್ರಮವು ವಿಟ್ಲ ಶಾಂತಿನಗರದ ಅಕ್ಷಯ ಸಭಾ ಭವನದಲ್ಲಿ ಜು.31 ರಂದು ಭಾನುವಾರ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಪು ನೀರ್ಕಜೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ರೇವತಿ ಆಟಿ ಆಚರಣೆ, ಆಟಿ ತಿಂಗಳು ತಯಾರಿಸುವ ವಿಶೇಷ ತಿಂಡಿಗಳು ಮತ್ತು ಅವುಗಳ ಔಷದೀಯ ಗುಣಗಳ ಬಗ್ಗೆ ಮಾಹಿತಿ ನೀಡಿದರು.
ಪುತ್ತೂರು ಸೈಂಟ್ ಫಿಲೋಮಿನ ಕಾಲೇಜಿನ ಉಪನ್ಯಾಸಕಿ ಹರಿಣಾಕ್ಷಿ ಕೇವಳ ಅತಿಥಿಯಾಗಿ ಭಾಗವಹಿಸಿದ್ದರು. ಸಭಾಧ್ಯಕ್ಷತೆ ಸಂಘದ ಅಧ್ಯಕ್ಷ ಕೆ ಲಿಂಗಪ್ಪ ಗೌಡ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಪಿ ಬೆಳಿಯಪ್ಪ ಗೌಡ ದೇವರಮನೆ ಮತ್ತು ಯುವ ವೇದಿಕೆಯ ಅಧ್ಯಕ್ಷ ವಿನಯ್ ಉಪಸ್ಥಿತರಿದ್ದರು. ಮಹಿಳಾ ಸಂಘದ ಅಧ್ಯಕ್ಷೆ ಧರ್ಮಾವತಿ ಪಿ ಬೆಳಿಯಪ್ಪ ಗೌಡ ಸ್ವಾಗತಿಸಿದರು. ವಿಠಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜಲಜಾಕ್ಷಿ ಬಾಲಕೃಷ್ಣ ವಂದಿಸಿದರು. ಜಯಂತಿ ನೀಲಪ್ಪ ಗೌಡ ರೆಂಜಾಡಿ ಕಾರ್ಯಕ್ರಮ ನಿರೂಪಿಸಿದರು.
