ಬಿ ಸಿ ರೋಡು : ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ, ಮಂಗಳೂರು ರೆಡ್ ಕ್ರಾಸ್ ಸಂಸ್ಥೆ, ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸಮಾಜ ಸೇವಾ ಘಟಕ ಆಶ್ರಯದಲ್ಲಿ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ರಕ್ತದಾನ ಶಿಬಿರ ನಡೆಯಿತು. ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾಂಶುಪಾಲರಾದ ಡಾ.ಅಜಕ್ಕಳ ಗಿರೀಶ್ ಭಟ್, ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ. ಶ್ರೀಯಾನ್, ಮಾಜಿ ಅಧ್ಯಕ್ಷರಾದ ಜಯಾನಂದ ಪೆರಾಜೆ, ವಿಶ್ವನಾಥ್ ಬಂಟ್ವಾಳ, ಪಾರೂಕ್ ಬಂಟ್ವಾಳ , ರಾಜ ಬಂಟ್ವಾಳ, ರೆಡ್ ಕ್ರಾಸ್ ಸಂಸ್ಥೆಯ ವ್ಯವಸ್ಥಾಪಕ ಎಡ್ವರ್ಡ್ ವಾಸ್, ಕಿರಿಯ ಅಧಿಕಾರಿ ಸಚೇತ್ ಸುವರ್ಣ,ರೆಡ್ ಕ್ರಾಸ್ ಸಂಸ್ಥೆಯ ಸದಸ್ಯ ಪದ್ಮನಾಭ, ಎನ್.ಎಸ್.ಎಸ್ ಘಟಕಾಧಿಕಾರಿ ಹೈದರಾಲಿ, ಸ್ಥಳೀಯ ಪುರಸಭೆಯ ಸದಸ್ಯ ಸದಾಶಿವ ಬಂಗೇರ ಮೊದಲಾದವರು ಉಪಸ್ಥತಿದ್ದರು

