ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಸರಪಾಡಿ ಪ್ರೌಢಶಾಲೆಯಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರಗಿತು.
ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ತುಳು ಪಠ್ಯ ಕ್ರಮದಲ್ಲಿ ಕಲಿಯುವ ಬಗ್ಗೆ ಕೀಳರಿಮೆ ಬೇಡ,ಅಧಿಕೃತವಾದ ವ್ಯವಸ್ಥೆಂiÀiಲ್ಲಿ ನನ್ನ ಮಾತೃಭಾಷೆ ಕಲಿಯುತ್ತೇನೆ ಎನ್ನುವ ಹೆಗ್ಗಳಿಕೆ ನಿಮ್ಮಲ್ಲಿರಲಿ, ತುಳುನಾಡಿನ ಬಗ್ಗೆ ಮತ್ತು ವಿಶೇಷ ವಿಚಾರಗಳಿಂದ ಕೂಡಿದ ಪುಸ್ತಕಗಳನ್ನು ರಚಿಸಲಾಗಿದೆ.
ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಜೊತೆಯಲ್ಲಿ, ವಿದ್ಯಾರ್ಥಿವೇತನ ದೊರಕಲು ಇದುಪೂರಕವಾಗಿದೆ ಎಂದ ಅವರು ಜಿಲ್ಲೆಯಲ್ಲಿ ಒಟ್ಟು 21 ಶಾಲೆಗಳಲ್ಲಿ 1029 ವಿದ್ಯಾರ್ಥಿಗಳು ತುಳುವನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿ ಅಧ್ಯಯನ ಮಾಡುತ್ತಿದ್ದಾರೆ ಎಂದರು. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ತುಳುಭಾಷೆಯ ಬಗ್ಗೆ ಅಧ್ಯಯನ ನಡೆಸಲು ಅವಕಾಶವಿದೆ.ಶಾಲೆಗಳಲ್ಲಿ ತುಳುಭಾಷೆಯ ಪಠ್ಯವನ್ನು ತೃತೀಯ ಭಾಷೆಯನ್ನಾಗಿ ಬಳಸುವ ಮೂಲಕ ಭವಿಷ್ಯದ ತುಳುವಿನ ಅ„ಕೃತ ಅರ್ಹತೆ ಹೊಂದುತ್ತೀರಿ ಎಂದರು.
ಹಿರಿಯ ಯಕ್ಷಗಾನ ಕಲಾವಿದ, ಜಾನಪದ ವಿದ್ವಾಂಸ ಉಗ್ಗಪ್ಪ ಶೆಟ್ಟಿ ಸರಪಾಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.ಯುಗಯುಗ ಕಳೆದರೂ ತುಳು ಮಾಸದ ಭಾಷೆ, ಮಕ್ಕಳು ವಿದ್ಯೆ ಕಲಿಯುವ ಯಂತ್ರವಾಗದೆ ಭಾಷೆ, ಸಂಸ್ಕೃತಿ ಬಗ್ಗೆ ಒಲವು ತೋರಬೇಕು. ತುಳು ಭಾಷಿಗರಿಗೆ ದೇಶ ವಿದೇಶಗಳಲ್ಲಿ ಹೆಚ್ಚಿನ ಮನ್ನಣೆ ಇದೆ ಎಂದರು.
ತುಳುಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಮಾತನಾಡಿ ಅಕಾಡೆಮಿಯ ಮಾಜಿ ಅಧ್ಯಕ್ಷ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ವಿಶೇಷ ಪ್ರಯತ್ನದಿಂದ ತುಳು ಪಠ್ಯ ಯೋಜನೆ ಅನುಷ್ಠಾನಗೊಂಡಿದೆ.ಪ್ರಸ್ತುತ ಪದವಿಪೂರ್ವ ತರಗತಿಗೆ ಎರಡನೇ ಪಠ್ಯವಾಗಿ ಸೇರಿಸಲು ಅಕಾಡೆಮಿ ಪ್ರಯತ್ನ ನಡೆಸುತ್ತಿದೆ. ಹಾಗೂ ಶಿಕ್ಷಕರ ಶಿಕ್ಷಣ ತರಬೇತಿಯಲ್ಲಿ ತುಳುಪಠ್ಯವನ್ನು ಒಂದು ವಿಷಯವನ್ನಾಗಿಸಬೇಕೆಂಬ ನಮ್ಮ ಬೇಡಿಕೆ ಶೀಘ್ರ ಈಡೇರಲಿದೆ ಎಂದರು.ಮಾಜಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ,ಹಿರಿಯ ಯಕ್ಷಗಾ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ ತುಳು ಭಾಷೆಯನ್ನು 8ನೇ ಪರಿಚ್ಛೇಧಕ್ಕೆ ಸೇರಿಸಲು ಪೂರಕವಾಗಿ ಶಾಲೆಗಳಲ್ಲಿ ತುಳು ಪಠ್ಯಕ್ರಮದ ಅವಕಾಶವನ್ನು ಬಳಸಿಕೊಳ್ಳಲು ಪೋಷಕರು ಮತ್ತು ಶಿಕ್ಷಕರು ಹೆಚ್ಚುನ ಕಾಳಜಿವಹಿಸುವಂತೆ ಅವರು ಮನವಿ ಮಾಡಿದರು.ಶಾಲಾಭಿವೃದ್ದಿ ಸಮಿತಿ ಸದಸ್ಯೆ ದೇವಕಿ, ತುಳು ಭಾಷಾ ಶಿಕ್ಷಕಿ ರಮ್ಯ. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.ಇದೇ ವೇಳೆ ವಿದ್ಯಾರ್ಥಿಗಳಿಗೆ ತುಳು ಪಠ್ಯ ಪುಸ್ತಕ ವಿತರಿಸಲಾಯಿತು. ಮುಖ್ಯ ಶಿಕ್ಷಕ ಉದಯಕುಮಾರ್ ಜೈನ್ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಲಲಿತ ಕಾರ್ಯಕ್ರಮ ನಿರೂಪಿಸಿದರು.
