ಉಳ್ಳಾಲ: ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗ್ರಾಮದಾದ್ಯಂತ ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ,ಇದೀಗ ಕಡಿಮೆ ಅವಧಿಯಲ್ಲಿಯೇ ಮತ್ತೊಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿ ಎಂದರು.ಸಂಘವು ಇನ್ನು ಮುಂದಕ್ಕೂ ಕೂಡಾ ಇಂಥಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಇತರರಿಗೆಮಾದರಿಯಾಗಲಿ,ಸಂಘಕ್ಕೆ ಯಾವುದೇ ರೀತಿಯ ಸಹಕಾರ ನೀಡಲು ಸದಾ ಸಿದ್ದ ಎಂದರು.
ಕಾರ್ಯಕ್ರಮದ ಉಧ್ಘಾಟನೆಯನ್ನು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮೊಹಮ್ಮದ್ ಮೋನು ರವರು ನೆರವೇರಿಸಿ ಮಾತನಾಡುತ್ತಾ ಯಾದ್ ಫೌಂಡೇಷನ್ ಎಂಬ ಸಂಸ್ಥೆಯು ಕಳೆದ ಮೂರು ವರುಷಗಳಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಸಚಿವ ಯು.ಟಿ.ಖಾದರ್ ದೂರವಾಣಿ ಕರೆಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾಗಿ ಸಚಿವರ ಅನುಪಸ್ಥಿತಿಯಲ್ಲಿ ತಾನು ಕಾರ್ಯಕ್ರಮ ಉಧ್ಘಾಟಿಸುವುದಾಗಿ ಎಂದರು.IMG-20160729-WA0022

IMG-20160729-WA0025

IMG-20160729-WA0026

ಕಾರ್ಯಕ್ರಮದಲ್ಲಿ ಅರಸ್ಥಾನ ಹಾಗೂ ನೆರೆಹೊರೆಯ ಜಮಾಅತಿನಲ್ಲಿ ಯಾರಾದರೂ ಮರಣ ಹೊಂದಿದಾಗ,ಯಾವುದೇ ಪ್ರತಿಫಲಾಪೇಕ್ಷಿಸದೆ ಖಬರ್ ತೋಡಲು ಕಾರ್ಯೋನ್ಮುಖ ರಾಗುವ ಜನಾಬ್ ಆರ್.ಅಝೀಝ್,ಜನಾಬ್ ಆರ್ ಶೆರೀಫ್ ಹಾಗೂ ಕಬೀರ್ ಕೆಳಗಿನಮಾರ್ಗರವರನ್ನು ಸನ್ಮಾನಿಸಲಾಯಿತು.ಸಮಾಜ ಸೇವಕರು,ಕವಿ,ವಕೀಲರೂ ಆದ ಜನಾಬ್ ಬಿ.ಎಸ್.ಹಸನಬ್ಬರವರನ್ನು ಕೂಡಾ ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಿಯಾಝ್ ಗಾಡಿಗದ್ದೆರವರು ವಹಿಸಿದ್ದರು.ಯಾದ್ ಫೌಂಡೇಷನ್ ಮಲಾರ್,ಇದರ ವತಿಯಿಂದ ಪಾವೂರು ಗ್ರಾಮ ಪಂಚಾಯತ್ ಗೆ ಒಳಪಟ್ಟ ವಿವಿಧ ಮದರಸಗಳ ವಿಧ್ಯಾರ್ಥಿಗಳಿಗೆ ಉಚಿತ ಖುರಾನ್ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು ಅರಸ್ಥಾನ ಹಯಾತುಲ್ ಇಸ್ಲಾಂ ಮದರಸದಲ್ಲಿ ಜರಗಿತು.ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರೂ,ಸಂಘದ ಸದಸ್ಯರೂ ಆಗಿರುವ ಫಿರೋಝ್ ಮಲಾರ್ ರವರು ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ.ಜಿ.ಪಂ.ಸದಸ್ಯರಾದ ಎನ್.ಎಸ್.ಕರೀಂ,ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ ಖತೀಬರಾದ ರಿಯಾಝ್ ಪೈಝಿ,ತಾ.ಪಂ.ಸದಸ್ಯರಾದ ಜಬ್ಬಾರ್ ಬೋಳಿಯಾರು,ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಿರಾಜ್ ಕಿನ್ಯ,ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸತ್ತಾರ್,ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಫೀಕ್ ಮದಕ,ಮಾಜಿ ತಾ.ಪಂ ಸದಸ್ಯರಾದ ನೆಕ್ಕರೆ ಬಾವಾಕ , ಫಾರೂಕ್ ಸಿ.ಎಂ,ಶೌಕತ್ ಬದ್ರಿಯಾ ನಗರ,ಮಾಜಿ ಪಂಚಾಯತ್ ಸದಸ್ಯ ನಾಸಿರ್ ಮಲಾರ್, ಮಜೀದ್ ಮಾಸ್ತರ್ ,ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ ಉಪಾಧ್ಯಕ್ಷರಾದ ಮಹಮ್ಮದ್,ಕೋಶಾಧಿಕಾರಿ ಡಿ.ಮಹಮ್ಮದ್,ಜತೆ ಕಾರ್ಯದರ್ಶಿ ಅಲ್ತಾಫ್ ಹಾಮದ್ ಹಾಗೂ ಜಮಾಅತ್ ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ ಇದರ ಪ್ರಧಾನ ಕಾರ್ಯದರ್ಶಿಯೂ,ಸಂಘದ ಜತೆ ಕಾರ್ಯದರ್ಶಿಯಾದ ಹನೀಫ್ ಕೆ.ಎಂ ರವರು ವಂದಿಸಿದರು.

By suddi9

Leave a Reply

Your email address will not be published. Required fields are marked *