ಮೂಡುಬಿದಿರೆ: ಲಯನ್ಸ್ ಜಿಲ್ಲೆ 317 ಡಿ. ಇದರ ರಸ್ತೆ ಸುರಕ್ಷತೆ ಮತ್ತು ಅಪಘಾತ ಜಾಗೃತ ವಿಭಾಗದ ಜಿಲ್ಲಾ ಸಂಯೋಜಕರನ್ನಾಗಿ ಶಿವಪ್ರಸಾದ್ ಹೆಗ್ಡೆಯವರನ್ನು ಎರಡನೇ ಬಾರಿಗೆ ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ ನಿಯೋಜಿಸಿದ್ದಾರೆ.0000
ಇವರು ಸುಮಾರು 40ಕ್ಕೂ ಮಿಕ್ಕಿ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಸಂಯೋಜಿಸಿದ್ದರು. ಕಳೆದ 15ವರ್ಷಗಳಿಂದ ಮಂಜುಶ್ರೀ ಡ್ರೈವಿಂಗ್ ಸ್ಕೂಲ್‍ನ ಸಹಭಾಗಿತ್ವದೊಂದಿಗೆ 530 ಅಭ್ಯರ್ಥಿಗಳಿಗೆ ಉಚಿತ ಡ್ರೈವಿಂಗ್ ತರಬೇತಿಯನ್ನು ನೀಡಿದ್ದಾರೆ ಹಾಗೂ 2015-16ರಲ್ಲಿ 120 ಆಟೋ ಚಾಲಕರಿಗೆ ತಲಾ ಒಂದು ಲಕ್ಷ ರೂಪಾಯಿಯ ವಿಮಾ ಯೋಜನೆಯನ್ನು ಉಚಿತವಾಗಿ ನೀಡಿದ್ದಾರೆ. ಇವರು ಎ.ಜಿ.ಸೋನ್ಸ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ತರಬೇತಿ ಅಧಿಕಾರಿಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *