ಬಂಟ್ವಾಳ:ಕೃಷಿ ಕಾರ್ಯಗಳಿಗೆ ಪೂರಕವಾದ ನೀರಿನ ಸೌಲಭ್ಯಕ್ಕೆ ಕೊಳವೆ ಬಾವಿ ಕೊರೆಯಲು ಪ್ರಸ್ತುತ ಇರುವ ಕನಿಷ್ಟ 500 ಮೀ.ದೂರದ ಮಿತಿಯನ್ನು ಕಡಿಮೆಗೊಳಿಸಲು ಗ್ರಾಮ ಪಂಚಾಯತ್ ಮೂಲಕ ಸರಕಾರವನ್ನು ವಿನಂತಿಸಬೇಕೆಂದು ಉಳಿ ಗ್ರಾಮ ಸಭೆಯಲ್ಲಿ ಕೃಷಿಕ ಗ್ರಾಮಸ್ಥರಿಂದ ಬೇಡಿಕೆ ಕೇಳಿ ಬಂದಿದೆ.ಕಕ್ಯಪದವು,ಉಳಿ ಯುವಕ ಮಂಡಲ ಸಭಾಭವನದಲ್ಲಿ ಜು.26ರಂದು ಅಪರಾಹ್ನ ಜರಗಿದ ಬಂಟ್ವಾಳ ತಾಲೂಕು ಉಳಿ ಗ್ರಾಮ ಪಂಚಾಯತ್‍ನ 2016-17ನೇ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ವಿವಿಧ ಬೇಡಿಕೆ ಸಲ್ಲಿಸಿದರು.

ಗ್ರಾ.ಪಂ. ಅಧ್ಯಕ್ಷೆ ದೀನಾಕ್ಷಿ ಮಲ್ಯೋಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾ„ಕಾರಿ ಕಚೇರಿ ಶಿಕ್ಷಣ ಸಂಯೋಜಕಿ ಸುಜಾತ ಅವರು ಮಾರ್ಗದರ್ಶಿ ಅ„ಕಾರಿಯಾಗಿ ಸಭೆ ನಿರ್ವಹಿಸಿದರು.
ಕೊಳವೆ ಬಾವಿ ಮಿತಿ ಸಡಿಲಿಕೆಗೆ ರಾಮಣ್ಣ ಪೂಜಾರಿ ಅವರ ಬೇಡಿಕೆಗೆ ಕೊಳವೆ ಬಾವಿ ಕೊರೆಯಲು ಅನುಮತಿಗಾಗಿ ಜಿಲ್ಲಾ„ಕಾರಿಯವರನ್ನೊಳಗೊಂಡ ಜಿಲ್ಲಾಮಟ್ಟದ ಸಮಿತಿಯಿದ್ದು ,ಕುಡಿಯುವ ನೀರಿನ ಸೌಲಭ್ಯದ ಸರಕಾರಿ ಕೊಳವೆ ಬಾವಿಯಿಂದ 500 ಮೀ.ದೂರವನ್ನು ಮಿತಿಗೊಳಿಸಲಾಗಿದೆ.ಮಿತಿಯನ್ನು ಕಡಿಮೆಗೊಳಿಸಲು ಜಿಲ್ಲಾ ಮಟ್ಟದ ಸಮಿತಿಯಲ್ಲಿ ವಿನಂತಿಸಬಹುದು ಎಂದು ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಅವರ ಸಲಹೆಯ ಮೇರೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.
ಕಕ್ಯಪದವಿನಲ್ಲಿ ಮೆಸ್ಕಾಂ ವಲಯ ಕಚೇರಿಯಿದ್ದು ಅದರಲ್ಲಿ ವಿದ್ಯುತ್ ಬಿಲ್ ಪಾವತಿಸಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಗೆ ತತ್‍ಕ್ಷಣ ಸ್ಪಂದಿಸಿದ ಜಿ.ಪಂ.ಸದಸ್ಯರು ಮೆಸ್ಕಾಂ ಮೇಲ„ಕಾರಿಯವರೊಡನೆ ದೂರವಾಣಿಯಲ್ಲಿ ಈ ಬಗ್ಗೆ ಮಾತನಾಡಿ ಬಿಲ್ ಪಾವತಿಗೆ ಅವಕಾಶ ನೀಡಲು ಸೂಚಿಸಿದರು.ನೆಕ್ಕಿಲಪಲ್ಕೆ-ಹೆಗ್ಗಣಗುಳಿ ರಸ್ತೆ,ಆಯರ್‍ಮಾರ್-ಗುಂಡಿತೊಟ್ಟು ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ನಾಯಕ್,ಜಿ.ಪಂ.ಇಂಜಿನೀಯರಿಂಗ್ ಬಂಟ್ವಾಳ ಉಪವಿಭಾಗ ದ ಅಭಿಯಂತರ ಕೃಷ್ಣ ,ತೋಟಗಾರಿಕೆ ಇಲಾಖೆಯ ಸಹಾಯಕ ಅ„ಕಾರಿ ನಂದಿನಿ,ಪಶು ವೈದ್ಯಾ„ಕಾರಿ ರಾಜವರ್ಮ ಜೈನ್,ಮೆಸ್ಕಾಂ ಕಿರಿಯ ಅಭಿಯಂತರ ನಿತಿನ್, ಶಿಕ್ಷಣ ಸಂಯೋಜಕಿ ಸುಜಾತ,ಹಿರಿಯ ಆರೋಗ್ಯ ಸಹಾಯಕಿ ಡೈಸಿ,ಗ್ರಾಮ ಕರಣಿಕ ರಾಜು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕಿ ಸುಜಾತ ಅವರು ಇಲಾಖಾ ಮಾಹಿತಿ ನೀಡಿದರು.
ತಾ.ಪಂ.ಸದಸ್ಯೆ ಬೇಬಿ ಕೃಷ್ಣಪ್ಪ ,ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಮೈರ ಮತ್ತು ಎಲ್ಲಾ ಸದಸ್ಯರು, ಉಳಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಎ.ಚೆನ್ನಪ್ಪ ಸಾಲ್ಯಾನ್, ಮುಖ್ಯ ಕಾರ್ಯನಿರ್ವಹಣಾ„ಕಾರಿ ನಾರಾಯಪೂಜಾರಿ,ಪಂಚದುರ್ಗಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ,ಸರಕಾರಿ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಮ ಪಿ.ಸಾಲ್ಯಾನ್, ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಪಂಚಾಯತ್ ಸಿಬಂದಿ ಉಪಸ್ಥಿತರಿದ್ದರು.ಪಂ.ಅ.ಅ„ಕಾರಿ ಶ್ರೀಧರ್ ಅವರು ಸ್ವಾಗತಿಸಿ,ವಂದಿಸಿದರು.ಗ್ರಾ.ಪಂ.ಕಾರ್ಯದರ್ಶಿ ಉಷಾರಾಣಿ ವರದಿ ವಾಚಿಸಿದರು.
