ಮುಂಬಯಿ: ಬಿಲ್ಲವ ಜಾಗೃತಿ ಬಳಗ ಮುಂಬಯಿ ಇದರ ಬೊರಿವಲಿ ಸ್ಥಳೀಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ಜರಗಿತು. ಹರೀಶ್ ಜಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಬಿ. ಎನ್. ಚಂದ್ರಶೇಖರ್ ಅವರನ್ನು ಸಮಿತಿಯ ನೂತನ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು.
ಉಪ ಕಾರ್ಯಾಧ್ಯಕ್ಷರಾಗಿ ಸತೀಶ್ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಡಿ. ಎನ್. ಪೂಜಾರಿ, ಜತೆ ಕಾರ್ಯದರ್ಶಿಯಾಗಿ ದೇವದಾಸ್ ಅಮೀನ್, ಗೌರವ ಕೋಶಾಧಿಕಾರಿಯಾಗಿ ಯೋಗೇಶ್ ಪೂಜಾರಿ, ಜತೆ ಕೋಶಾಧಿಕಾರಿಯಾಗಿ ಆರ್. ಎಂ. ಜತ್ತನ್ ಅವರು ಆಯ್ಕೆಯಾದರು.ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಬಾಬು ಶಿವ ಪೂಜಾರಿ, ಎನ್. ಕೆ. ಸುವರ್ಣ, ಈಶ್ವರ ಎಂ. ಐಲ್, ವಿಜಯ ಮೂಲ್ಕಿ, ಗಿರಿಜಾ ಚಂದ್ರಶೇಖರ್, ಸುಗುಣಾ ಹರೀಶ್, ತಾರಾ ಜೆ. ಕೋಟ್ಯಾನ್, ಯಶೋಧಾ ಸಾಲ್ಯಾನ್, ಕೀರ್ತಿರಾಜ್ ಅಮೀನ್ ಅವರನ್ನು ನೇಮಿಸಲಾಯಿತು.ವಿಶೇಷ ಆಮಂತ್ರಿತರಾಗಿ ಸರೋಜಿನಿ ಜತ್ತನ್, ರಾಜೀವಿ ವಿ. ಅಮೀನ್ ಮತ್ತು ಗುಲಾಬಿ ಪೂಜಾರಿ ಅವರು ಆಯ್ಕೆಯಾದರು.
