ಬಂಟ್ವಾಳ: ತುಳು ಸಮ್ಮೇಳನ ಸಮಿತಿ ಮೂಲ್ಕಿ ಸಹಕಾರದೊಂದಿಗೆ ಸೌತ್‍ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ- ಉಡುಪಿ ಜಿಲ್ಲೆ ಇದರ ತುಳು ಸಮ್ಮೇಳನದ ಪ್ರಯುಕ್ತ ಆ.13 ಶನಿವಾರ ಮತ್ತು ಆ.14ಆದಿತ್ಯವಾರ ಬಪ್ಪನಾಡು ದೇವಸ್ಥಾನದಲ್ಲಿ ತುಳು ಸಂಸ್ತಿಕೃತಿ ವಿಷಯದಲ್ಲಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಆಯೋಜಿಸಲಾಗಿದೆ.
2+18 ಸೈಜಿನ ಗರಿಷ್ಟ ಚಿತ್ರಗಳನ್ನು ಕಳುಹಿಸಬಹುದಾಗಿದೆ. ಚಿತ್ರದ ಹಿಂಬದಿಯಲ್ಲಿ ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಬರೆದಿರಬೇಕು. ಚಿತ್ರದ ಮೇಲೆ ಯಾವುದೇ ವಾಟರ್ ಮಾರ್ಕ್ ಇರಕೂಡದು. ಚಿತ್ರಗಳನ್ನು ಅ.10ರ ಒಳಗೆ ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಛಾಯಾಭವನ, ವಸಂತಿ ಕಾಂಪ್ಲೆಕ್ಸ್ , ಪೆಟ್ರೋಲ್ ಪಂಪ್ ಎದುರುಗಡೆ ಕದ್ರಿ ಶಿವಬಾಗ್ ಮಂಗಳೂರು 575002 ಇಲ್ಲಿಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 5 ಸಾವಿರ, ದ್ವಿತೀಯ 5 ಸಾವಿರ, ತೃತೀಯ 3 ಸಾವಿರ ಹಾಗೂ 5 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಎಸ್‍ಕೆಪಿಎ ಸದಸ್ಯರಿಗೆ ಮಾತ್ರ ಈ ಅವಕಾಶ ಇದ್ದು ಸದಸ್ಯ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಾಯಿಸುವಂತೆ ಸೂಚಿಸಲಾಗಿದೆ.
