ಬಂಟ್ವಾಳ : ತಾಲೂಕು ಪೆರಾಜೆ ಗ್ರಾಮ ಪಂಚಾಯತ್ ನ 2016-17 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಾಜೆಯಲ್ಲಿ ಪಂಚಾಯತ್ ಅಧ್ಯಕ್ಷರಾದ  ಪುಷ್ಪ ಇವರ ಅಧ್ಯಕ್ಷತೆಯಲ್ಲಿ  ಜು .18 ರಂದು ಸೋಮವಾರ ನಡೆಯಿತು.  ಈ ಸಭೆಗೆ ನೋಡಲ್ ಅಧಿಕಾರಿಯಾಗಿ ಎಸ್.ಕೆ ಸಿದ್ದರಾಜು( ರೇಷ್ಮ ಇಲಾಖೆ)  . ಸಭೆಯಲ್ಲಿ  ವಿವಿದ ಇಲಾಖೆಗಳಾದ ತೋಟಗಾರಿಕೆ, ಕೃಷಿ ಇಲಾಖೆ, ಮೆಸ್ಕಾಂ ಇಲಾಖೆ , ಶಿಶು ಅಭಿವೃದ್ದಿ ಇಲಾಖೆ, ಪಂಚಾಯತ್ ರಾಜ್ ಇಂಜಿಯರಿಂಗ್ ಇಲಾಖೆ, ರೇಷ್ಮೆ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯಿಂದ ಉಪಸ್ಥಿತರಿದ್ದರು.

20160718_114157

ವಿವಿದ ಇಲಾಖೆಯ ಮಾಹಿತಿಯನ್ನು ಗ್ರಾಮಾಸ್ಥರಿಗೆ  ಇಲಾಖಾಧಿಕಾರಿಗಳು ತಿಳಿಸಿದರು. ಊರಿನ ಪ್ರಮುಖ ಗಣ್ಯರಾದ   ಬಿ.ಟಿ ನಾರಯಣ ಭಟ್ ಮೆಸ್ಕಾಂ ಇಲಾಖೆಗೆ ವಿವಿದ ರೀತಿಯ ಮಾಹಿತಿಯನ್ನು ವಿಧ್ಯುತ್ ಬಳಕೆದಾರರಿಗೆ ಉಪಯೋಗವಾಗುವ ವಿವರಗಳನ್ನು ಚರ್ಚಿಸಿದರು.  ಹಾಗೂ  ಅಪ್ರಾಯ ಪೈ ಯವರು ರಾಷ್ಟೀಯ ಹೆದ್ದಾರಿ ರಾಜ್ಯ ಹೆದ್ದಾರಿ ಜಿಲ್ಲಾ ಪಂಚಾಯತ್ ರಸ್ತೆ ಬದಿಗಳ ಚರಂಡಿ ದುರಸ್ತಿ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇತರ ಇಲಾಖೆಗೆ ಪ್ರಸ್ತಾವನೆ ತಿಳಿಸಿದರು.  ಜನಾರ್ದನ ಎಂ.ಪಿ ಯವರು ಶಿಕ್ಷಣ ಇಲಾಖೆ ಮತ್ತು ಕೃಷಿ,ತೋಟಗಾರಿಕಾ ಇಲಾಖೆ ಗ್ರಾಮ ಸಭೆಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ವ್ಯಕ್ತಪಡಿಸಿದರು ಹಾಗೂ ಸಾರ್ವಜನಿಕರಿಗೆ ಶಿಕ್ಷಣ ಇಲಾಖೆಯಿಂದ ಸಿಗುವ ಮಾಹಿತಿಗಳು ಕಡಿಮೆಯಾಗಿರುವುದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳು ಕೂಡ ಕಡಿಮೆ ಆಗಲು ಕಾರಣ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯರಾದ  ಮಂಜುಳಾ ಮಾಧವ ಮಾವೆ ಮಾತನಾಡಿ ಗ್ರಾಮ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹಾಜರಾಗಿ ಇಲಾಖೆಗಳ ಮಾಹಿತಿಯನ್ನು ನೀಡಿದಾಗ ಜನರಿಗೆ ತುಂಬಾ ಪ್ರಯೋಜನ ವಾಗಬಹುದೆಂದು ಹೇಳಿದರು. ಅಲ್ಲದೆ ಪೆರಾಜೆ ಗ್ರಾಮದ ಪೆರಾಜೆ ಮಠ ರಸ್ತೆಗೆ ಕಾಂಕ್ರೀಟಿಕರಣಕ್ಕೆ ತನ್ನ ಅನುದಾನದಲ್ಲಿ ಇಟ್ಟು ಕಾಮಾಗಾರಿಯನ್ನು ಶೀಘ್ರ ಕೈಗೊಳ್ಳುವುದೆಂದು ತಿಳಿಸಿದರು. ಹಾಗೂ ಮಾಣಿ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಯನ್ನು ನೇಮಿಸಿರುವುದಾಗಿ ಹೇಳಿದರು.

ಈ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ  ಮಂಜುಳಾ ಕುಶಲ ಎಂ, ಪಂಚಾಯತ್ ಉಪಾಧ್ಯಕ್ಷರು, ಸದಸ್ಯರು, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕುಶಲ ಎಂ ಪೆರಾಜೆ ಅಂಗನವಾಡಿ ಕಾರ್ಯಕರ್ತರು, ಗ್ರಾಮಸ್ಥರು, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.  ತಿಮ್ಮಪ್ಪ ಗೌಡ ಸ್ವಾಗತಿಸಿ . ಪಂಚಾಯತ್ ಅಭಿವೃದ್ದಿ ಅಧಿಕಾರಿನವೀನ್ ರಾಬರ್ಟ್ ಧನ್ಯವಾದ ವಿತ್ತರು.

By suddi9

Leave a Reply

Your email address will not be published. Required fields are marked *