ಕೈಕಂಬ:ವಿದ್ಯಾರ್ಥಿಯು ಶಿಕ್ಷಣದೊಂದಿಗೆ ದೇಶಸೇವೆ ಮಾಡಲು ಎನ್‍ಎಸ್‍ಎಸ್ ಸಹಕಾರಿ ಎಂದು ಮಾಧವ ಪೈ ಸ್ಮಾರಕ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ವೈದ್ಯ ಹೇಳಿದರು.
ವಾಮಂಜೂರು ಸೈಂಟ್ ರೇಮಂಡ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಶೈಕ್ಷಣಿಕ ಚಟುವಟಿಕೆಗಳನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಎನ್‍ಎಸ್‍ಎಸ್ ಎಂದರೆ ಮಣ್ಣು ಹೊರುವಂತದಲ್ಲ.ದೇಶದ ಸಾಮಾಜಿಕ,ಆರ್ಥಿಕ ವಿಷಯಗಳಲ್ಲೂ ಪಾಲ್ಗೊಳ್ಳಬಹುದು ಎಂದರು.ಕಾರ್ಯಕ್ರಮದಲ್ಲಿ ಕಾಲೇಜೀನ ಪ್ರಿನ್ಸಿಪಾಲ್ ಸಿಸ್ಟರ್ ಸಗಯಾ ಸೆಲ್ವಿ, ಕೌನ್ಸಿಲರ್ ಸಿಸ್ಟರ್ ರಿಚರ್ಡ್, ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಡೊಂಯಯ್ಯ ಇಡ್ಕಿದು, ಉಪನ್ಯಾಸಕಿ ಹೆರೋಲಿನ್ ಉಪಸ್ಥಿತರಿದ್ದರು.

