ಬಂಟ್ವಾಳ : ಸಜಿಪಮೂಡ ಗ್ರಾಮದ ಕೇಪುಳಗುಡ್ಡೆಗೆ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ 10ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳ್ಳಲಿರುವ ರಸ್ತೆಗೆ ಅರಣ್ಯ ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಗ್ರಾ.ಪಂ.ಅಧ್ಯಕ್ಷ ಗಣಪತಿ ಭಟ್, ಪಂ.ಸದಸ್ಯರಾದ ರಮೇಶ್ ಪಣೋಲಿಬೈಲು , ಅಬ್ದುಲ್ ಅಝೀಝ್, ಮತ್ತು ಗಣ್ಯರಾದ ಬೇಬಿ ಕುಂದರ್, ವಿಶ್ವನಾಥ ಶೆಟ್ಟಿ ಪಂಬೈಲು, ಮಹಾಬಲ ರೈ ಬರ್ಕೆಗುತ್ತು ಮತ್ತಿತರರು ಉಪಸ್ಥಿತರಿದ್ದರು.

