ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಬಿ ಒಕ್ಕೂಟದ `ನಾಗಬ್ರಹ್ಮ-ಬಿ’ ಸ್ವ ಸಹಾಯ ಸಂಘದ 11 ನೇ ವರ್ಷದ ವಾರ್ಷಿಕೋತ್ಸವ ಪುಚ್ಚೆಗುತ್ತು ಸೇಸಪ್ಪ ನಾಯ್ಕರ ಮನೆಯಲ್ಲಿ ನಡೆಯಿತು. ಒಕ್ಕೂಟದ ಅಧಯಕ್ಷ ನೆಗಳಗುಳಿ ಸುಂದರ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ `ತಂಡವು ಯೋಜನೆಯ ನಿಯಮಾನುಸಾರ ಯೋಗ್ಯ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.
ಮುಂದಕ್ಕೂ ಪ್ರಗತಿ ಪಥದಲ್ಲಿ ನಡೆಯಲಿ’ ಎಂದು ಶುಭ ಹಾರೈಸಿದರು. ಮುಖ್ಯ ಅತೀಥಿ ವಲಯ ಮೇಲ್ವಿಚಾರಕ ಜನಾರ್ಧನ ರವರು `ತಂಡವು ಯೋಜನೆಯಿಂದ ದೊರಕಿದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದೆ. ಸದಸ್ಯರೆಲ್ಲ ಒಂದೇ ತಾಯಿಯ ಮಕ್ಕಳಂತಿದ್ದು ಶಿಸ್ತು ಭಂದವ್ಯ ಇಲ್ಲಿ ನೆಲೆಯಾಗಿದೆ ‘ ಎಂದರು.ಸೇವಾ ಪ್ರತಿನಿಧಿ ಸರಿತಾ, ಒಕ್ಕೂಟದ ಪದಾಧಿಕಾರಿಗಳಾದ ಪ್ರೇಮಾ ಹೆಗ್ಡೆ, ನಾರಾಯಣ, ಗಣೇಶ, ವಿಮಲಾ ಉಪಸ್ಥಿತರಿದ್ದರು. ಸೋಭಾ ಸ್ವಾಗತಿಸಿದರು. ವನಿತಾ ವರದಿ ವಾಚಿಸಿದರು. ಗಿರಿಜಾ ವಂದಿಸಿದರು. ಮಲ್ಲಿಕಾ ನಿರೂಪಿಸಿದರು. ಎಲ್ಲಾ ಸದಸ್ಯರು ಸಹಕರಿಸಿದರು.
