ವಿಟ್ಲ: ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲೀಯೋ ಕ್ಲಬ್ ಇದರ ವತಿಯಿಂದ ಆದಾಯ ಘೋಷಣೆ ಯೋಜನೆ 2016 ಬಗ್ಗೆ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಆದಾಯ ತೆರಿಗೆ ಬಗ್ಗೆ ಮಾಹಿತಿ ಕಾರ್ಯಕ್ರಮವು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಸಭಾ ಭವನದಲ್ಲಿ ನಡೆಯಿತು. ಆದಾಯ ತೆರಿಗೆ ಅಧಿಕಾರಿ ಆರ್ ಎಸ್ ಸಿದ್ದಪ್ಪಾಜಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸುಬ್ರಾಯ ಪೈ, ಸತೀಶ್ ಕುಮಾರ್ ಆಳ್ವ ಮತ್ತು ಅಣ್ಣು ನಾಯ್ಕ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ವಂದಿಸಿದರು.

