ಬಂಟ್ವಾಳ:ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಜನ ಸಾಮಾನ್ಯರು ತಂತ್ರಜ್ಞಾನವನ್ನೇ ಅವಲಂಬಿಸಿದ್ದಾರೆ. ಇದರಲ್ಲಿ ಮೊಬೈಲ್ ಕೂಡಾ ಒಂದು. ಜನರಿಗೆ ಅತ್ಯಂತ ಉಪಯೋಗಕಾರಿಯಾಗಬೇಕಾಗಿದ್ದ ಮೊಬೈಲ್ ಬಿಎಸ್ಎನ್ಎಲ್ ಗೋಪುರದ ಸಮಸ್ಯೆಯಿಂದ ಉಪಯೋಗಕ್ಕೆ ಬಾರದ ರೀತಿಯಾಗಿದ್ದು ಬಿಎಸ್ಎನ್ಎಲ್ ಸಿಮ್ ಬಳಕೆದಾರರು ಹತಾಶರಾಗಿದ್ದಾರೆ.
ಬಂಟ್ವಾಳ ತಾಲೂಕಿನ ರಾಯಿ , ಕೊಯಿಲ, ಅಣ್ಣಳಿಕೆ, ಸೊರ್ನಾಡು, ಸಿದ್ಧಕಟ್ಟೆ, ವಾಮದಪದವು ವ್ಯಾಪ್ತಿಯಲ್ಲಿ ಬಿಎಸ್ಎನ್ಎಲ್ ಮೊಬೈಲ್ ಸಂಪರ್ಕ ಸರಿಯಾಗಿ ಕಾರ್ಯ ನಿರ್ವಹಿಸದೇ ತೊಂದರೆ ನೀಡುತ್ತಿದ್ದು ಗ್ರಾಹಕರು ಖಾಸಗಿ ಮೊಬೈಲ್ ಸಂಪರ್ಕದ ಮೊರೆ ಹೋಗುತ್ತಿದ್ದಾರೆ.
0707pkt1
ಪ್ರಸ್ತುತ ಮೊಬೈಲ್ ಸಂಪರ್ಕವನ್ನು ಕಲ್ಪಿಸುವ ಭಾರತೀಯ ಸರಕಾರಿ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆ ಭಾರತ್ ಸಂಚಾರ್ ನಿಗಮ ಲಿಮಿಟೆಡ್(ಬಿ.ಎಸ್.ಎನ್.ಎಲ್.)ದೇಶದೆಲ್ಲೆಡೆ ತನ್ನ ಪ್ರಸರಣಾ ಜಾಲವನ್ನು ಹೊಂದಿದೆ.ಕನೆಕ್ಟಿಂಗ್ ಇಂಡಿಯಾ ಎಂಬ ಘೋಷಣೆಯೊಂದಿಗೆ ದೇಶಾದಾದ್ಯಂತ ಅಪಾರ ಗ್ರಾಹಕರನ್ನು ಹೊಂದಿದೆ.ಆದರೆ ಇತರ ಸರಕಾರಿ ಸಂಸ್ಥೆಗಳಂತೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ.
ಈ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ ಪದೇ ಪದೇ ಕೈಕೊಡುತ್ತಿದ್ದು ವಿದ್ಯುತ್ ಸಂಪರ್ಕ

ಕಡಿತದ ಜೊತೆ ಮೊಬೈಲ್ ಸಂಪರ್ಕವೂ ಕಡಿತಗೊಳ್ಳುತ್ತಿದೆ.ಇದು ಮಳೆಗಾಲದಲ್ಲಿ ಮಾತ್ರವಲ್ಲದೇ ಬೇಸಿಗೆ ಕಾಲದಲ್ಲೂ ನಡೆದುಕೊಂಡು ಬಂದಿದೆ.ಮೊಬೈಲ್ ಟವರ್ಗಳಲ್ಲಿ ವಿದ್ಯುತ್ ಕೊರತೆಯೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ. ಪ್ರಸ್ತುತ ಬಳಸುವ ವಿದ್ಯುತ್ಗೆ ಪಯರ್ಾಯವಾಗಿ ಬ್ಯಾಟರಿ ಅಥವಾ ಸೌರಶಕ್ತಿಯನ್ನು ಸಮರ್ಪಕವಾಗಿ ಬಳಸದಿರುವುದರಿಂದ ವಿದ್ಯುತ್ ಸಂರ್ಪಕ ಕಡಿತಗೊಂಡೊಡನೆ ಮೊಬೈಲ್ ಸಂಪರ್ಕ ಕಡಿತಗೊಳ್ಳುತ್ತದೆ.ಈ ಬಗ್ಗೆ ಅಕಾರಿಗಳಲ್ಲಿ ಸಾಕಷ್ಟು ಬಾರಿ ದೂರು ನೀಡಿದರೂ ಸರಿಪಡಿಸಲಾಗುವುದು ಎಂಬ ಸಿದ್ಧ ಉತ್ತರ ದೊರಕುತ್ತದೆ.

ನೆಟ್ವರ್ಕ್ ಸಮಸ್ಯೆಯಿಂದಾಗಿ ವ್ಯಾಪಾರ ವ್ಯವಹಾರಗಳಿಗೆ ತೊಂದರೆಯಾಗಿದೆ. ಮೊಬೈಲ್ ರೀಚಾರ್ಜ್ ಅಂಗಡಿಯವರು ವ್ಯವಹಾರ ನಡೆಸಲು ಕಷ್ಟವಾಗಿದೆ.ಆರೋಗ್ಯ ಮೊದಲಾದ ಅಗತ್ಯ ಸಂದರ್ಭಗಳಲ್ಲಿ ನೆಟ್ವಕರ್್ ದೊರಕದೆ ತೊಂದರೆಗೊಳಗಾದವರಿದ್ದಾರೆ.ಈ ಭಾಗದ ಜನತೆ ಮತ್ತು ಈ ಭಾಗದಲ್ಲಿ ಸಂಚರಿಸುವವರಿಗೆ ನೆಟ್ವರ್ಕ್  ಸಮಸ್ಯೆಯಿಂದ ಸಂವಹನ ಅಸಾಧ್ಯವಾಗಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರದ ಸ್ವಾಮ್ಯದ ಈ ಸಂಸ್ಥೆಯನ್ನು ನಷ್ಟದಿಂದ ಲಾಭದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.ಮೊಬೈಲ್ ಟವರ್ಗಳಿಗೆ ವಿದ್ಯುತ್ನ ಪರ್ಯಾಯ ಶಕ್ತಿಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹಲವಾರು ವರ್ಷಗಳ ಹಿಂದೆ ಕೇಂದ್ರ ಸರಕಾರ ಹೇಳಿಕೊಂಡು ಬಂದಿದೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್  ಸಮಸ್ಯೆ ಕಾಡುತ್ತಿದೆ.ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಕಾರಿಗಳು ,ಜನಪ್ರತಿನಿಗಳು ಮುತುವರ್ಜಿ ವಹಿಸಬೇಕಾಗಿದೆ.

ನೆಟ್ವರ್ಕ್ ಸಮಸ್ಯೆಯ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಬಿಎಸ್ಎನ್ಎಲ್ ಸಂಸ್ಥೆಯ ಡಿಜಿಎಂ ಅವರ ಗಮನಕ್ಕೆ ತರಲಾಗಿದೆ.ಟವರ್ಗಳಲ್ಲಿ ವಿದ್ಯುತ್ ಕೊರತೆಯಿಂದ ಬ್ಯಾಟರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಸಮಸ್ಯೆ ಉಂಟಾಗಿದೆ.ಶೀಘ್ರ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
-ಎಂ.ತುಂಗಪ್ಪ ಬಂಗೇರ,ಜಿ.ಪಂ.ಸದಸ್ಯರು

ಚಿತ್ರ:ಕಿಶೋರ್ ಪೆರಾಜೆ

By suddi9

Leave a Reply

Your email address will not be published. Required fields are marked *