ಮೂಡುಬಿದಿರೆ : ಕೋಟಿ ವೃಕ್ಷ ಅಭಿಯಾನದಂಗವಾಗಿ ಮೂಡುಬಿದಿರೆ ವಲಯಾರಣ್ಯಾಧಿಕಾರಿಗಳ ಕಛೇರಿ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಆವರಣದಲ್ಲಿ ಸೋಮವಾರ ವನಮಹೋತ್ಸವವನ್ನು ಆಚರಿಸಲಾಯಿತು. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಮೂಡುಬಿದಿರೆ ವಲಯಾರಣ್ಯಾಧಿಕಾರಿ ಜಿ.ಡಿ ದಿನೇಶ್ ಅವರ ಮಾರ್ಗದರ್ಶನದಲ್ಲಿ ಒಟ್ಟು 22 ಸಸಿಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು.
ಮೂಡುಬಿದಿರೆ ಉಪವಲಯಾರಣ್ಯಾಧಿಕಾರಿ ಅನಿಲ್ ಕೆ., ಪೊಲೀಸ್ ಉಪನಿರೀಕ್ಷಕ ದೇಜಪ್ಪ, ಮುಖ್ಯ ಪೇದೆ ರವೀಂದ್ರನಾಥ ರೈ, ಸಹಾಯಕ ಠಾಣಾಧಿಕಾರಿಗಳಾದ ಶಂಕರ ನಾಯ್ಕ್, ಕೃಷ್ಣ ಎಂ.ಸಿ, ಹಾಗೂ ಸಿಬಂದಿ ವರ್ಗ, ಅರಣ್ಯ ರಕ್ಷಕರಾದ ಅಯ್ಯಣ್ಣ, ರಮೇಶ್ ಕೆ, ಅರಣ್ಯ ವೀಕ್ಷಕರಾದ ಸುಧಾಕರ ಸದಾನಂದ ಹಾಗೂ ನಾರಾಯಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
