ಮೂಡುಬಿದಿರೆ: ಮಿಜಾರು ಶೋಭಾವನದಲ್ಲಿರುವ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ `ರಾಷ್ಟ್ರೀಯ ವೈದ್ಯರ ದಿನಾಚರಣೆ’ ಕಾರ್ಯಕ್ರಮ ನಡೆಯಿತು.
ಮೂಡಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಧನಂಜಯ ಮೂಡಬಿದಿರೆ ಅವರು ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ಸ್ಥಾಪಕಾಧ್ಯಕ್ಷ, ಭಾರತ ರತ್ನ ಡಾ.ಬಿ.ಸಿ. ರಾಯ್ ಅವರ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಭಾರತದಲ್ಲಿ ಶೇ. 70ರಷ್ಟು ಮಂದಿ ಜೀವಿಸುವ ಗ್ರಾಮಗಳಲ್ಲಿ ಸೇವೆ ಸಲ್ಲಿಸಲು ನೂತನ ವೈದ್ಯಕೀಯ ಪದವೀಧರರು ಹಿಂದೇಟು ಹಾಕುತ್ತಿದ್ದಾರೆ.ಈ ಸ್ಥಿತಿಯನ್ನು ಬದಲಾಯಿಸಲು ಮನಸ್ಸು ಮಾಡಬೇಕಾಗಿದೆ. ರೋಗಿಯ ಜೀವ ತನ್ಮೂಲಕ ಜೀವನ ಉಳಿಸುವ ಪರಮ ಪಾವನ ವೃತ್ತಿ ನಡೆಸುವ ವೈದ್ಯರು ಒಂದೊಮ್ಮೆ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲಾಗದಿದ್ದಲ್ಲಿ ಅರ್ಹ ವೈದ್ಯರೆಡೆಗೆ ಕಳುಹಿಸಿಕೊಡುವ ಒಳ್ಳೆಯತನ ತೋರಬೇಕು.ಔಷಧಿಗಿಂತಲೂ ಮಿಗಿಲಾಗಿ ರೋಗಿಯ ಹಿತೈಷಿಯಾಗಿ, ಆತ್ಮೀಯ ವ್ಯಕ್ತಿಯಾಗಿ ಆತನ ಮನಮುಟ್ಟುವ ಗುಣವನ್ನು ರೂಢಿಸಿಕೊಳ್ಳಬೇಕು ಎಂದರು.
ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಕಾಯಿಲೆಗಳಿಗೆ ಒಂದಷ್ಟು ಮದ್ದು , ಮಾತ್ರೆಗಳನ್ನು ಸೇವಿಸುವ ಗೀಳಿನಿಂದ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ, ಬಹಳ ಕಡಿಮೆ ವೆಚ್ಚದಲ್ಲಿ ಹೋಮಿಯೋಪತಿ ವೈದ್ಯಪದ್ಧತಿಯ ಮೂಲಕ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯಪೂರ್ಣ ಬದುಕನ್ನು ಸಾಗಿಸಲು ಸಾಧ್ಯವಿದೆ ಎಂದು ಡಾ. ರಖಾಲ್ ಅವರು ಡಾ.ಬಿ.ಸಿ. ರಾಯ್ ವ್ಯಕ್ತಿ ಚಿತ್ರಣ ನೀಡಿ ಅವರ ಜನ್ಮದಿನ (ಜು.1)ದಂದು ಆಚರಿಸಲಾಗುವ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಫಾರ್ಮಸಿ ವಿಭಾಗ ಮುಖ್ಯಸ್ಥ ಡಾ.ವೈ. ಎಂ . ಖಾದ್ರಿ ಸ್ವಾಗತಿಸಿದರು. ಡಾ.ಅರ್ಚನಾ ಸಿ. ಇಂಗೋಲೆ ನಿರೂಪಿಸಿದರು. ಡಾ. ಪ್ರಜ್ಞಾ ಆಳ್ವ ವಂದಿಸಿದರು.
ಆಳ್ವಾಸ್ ನಿಂದ ಹೆಲ್ತೆ ಕಾರ್ಡ್ :
ಆಳ್ವಾಸ್ ಕಾಲೇಜಿನ ವತಿಯಿಂದ ನೀಡಲಾಗುವ ಹೆಲ್ತ್ ಕಾರ್ಡ್ ಪಡೆದುಕೊಂಡು ಉಚಿತ ತಪಾಸಣೆ ಮತ್ತು ಸಾಂಕೇತಿಕ ವೆಚ್ಚದಲ್ಲಿ ಔಷಧ ಪಡೆದುಕೊಳ್ಳುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೋಮಿಯೋಪತಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಜನರು ಈ ಮಹತ್ವಪೂರ್ಣವೈದ್ಯಪದ್ದತಿಯ ಲಾಭದಿಂದ ವಂಚಿತರಾಗಿದ್ದಾರೆ; ಈ ಸ್ಥಿತಿಯನ್ನು ಹೋಗಲಾಡಿಸಲು ಸರಕಾರವೂ ಪ್ರಯತ್ನಿಸುತ್ತಿದೆ.
-ಡಾ.ಪ್ರವೀಣ್ರಾಜ್, ಪ್ರಾಂಶುಪಾಲ
ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜಿನ
