ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆದ 7ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ-2017 ಭಾನುವಾರ ಸಮಾಪನಗೊಂಡಿದೆ. 12023 ಅಭ್ಯರ್ಥಿಗಳು ಎರಡು ದಿನ ಭಾಗವಹಿಸಿದ್ದು, ಅದರಲ್ಲಿ 4744 ಅಭ್ಯರ್ಥಿಗಳು ಆಯ್ಕೆ, 1209 ಅಭ್ಯರ್ಥಿಗಳು ಕಂಪನಿಗಳಿಗೆ ನೇರವಾಗಿ ನೇಮಕಗೊಂಡಿದ್ದಾರೆ. 10,864 ಮಂದಿ ಆನ್ಲೈನ್ ಹಾಗೂ 1974 ಮಂದಿ ಸ್ಥಳದಲ್ಲೇ ನೋಂದಣಿ ಮಾಡಿಸಿಕೊಂಡಿದ್ದರು. ನೋಂದಣಿ ಮಾಡಿದ್ದ 12,838 ಮಂದಿಯಲ್ಲಿ 12023 ಅಭ್ಯರ್ಥಿಗಳು ಭಾಗವಹಿಸಿದ್ದರು.

ಉತ್ಪಾದನಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ, ಆರೋಗ್ಯ, ಫಾರ್ಮಸಿ, ಶಿಕ್ಷಣ, ಮಾರಾಟ ಕ್ಷೇತ್ರ, ಮೊದಲಾದ ಕ್ಷೇತ್ರಗಳಿಂದ ಉದ್ಯೋಗ ಮೇಳದಲ್ಲಿ 309 ಕಂಪೆನಿಗಳು ಭಾಗವಹಿಸಿದ್ದವು. ಒರೇಕಲ್, ಐಬಿಎಂ, ಟಿಸಿಎಸ್, ಅಮೇಜಾನ್, ಎನ್ಎಂಸಿ, ಯುಎಇ ಎಕ್ಸ್ಚೆಂಜ್, ಅದಾನಿ ಗ್ರೂಪ್, ಟೆಕ್ ಮಹೀಂದ್ರ, ತಾಜ್ಗ್ರೂಪ್, ಐಸಿಐಸಿಐ ಬ್ಯಾಂಕ್, ಟಿವಿಎಸ್, ಎಂಫಸಿಸ್. ಸ್ಟ್ಯಾಂಡರ್ಡ್ ಚಾರ್ಟಡ್ , ಆಕ್ಸಿಸ್ ಬ್ಯಾಂಕ್, ಕಿರ್ಲೋಸ್ಕರ್ ಎಲೆಕ್ಟ್ರಿಕ್, ಏರ್ಟೆಲ್, ಐಡಿಯಾ, ವೊಡಾಫೋನ್, ರಿಲಾಯನ್ಸ್, ಸುಜ್ಲಾನ್, ಏಜೀಸ್, ಎಚ್ಡಿಎಫ್ಸಿ, ಕ್ಯಾಪ್ಜೆಮಿನಿ, ಜೆನಿಸಿಸ್ ಸಾಫ್ಟ್ವೇರ್, ನಾರಾಯಣ ಹೃದಯಾಲಾಯ, ವೊಕಾರ್ಟ್ , ಬೋದ್ಟೆಕ್, ಇನ್ಫೋಸಿಸ್ ಬಿಪಿಒ, ಕೋಡ್ಕ್ರಾಪ್ಟ್, ಎಜೆ ಹಾಸ್ಪಿಟಲ್, ಐಎಂ ವಿಂಡ್ಮಿಲ್, ಕೆಟಿಟಿಎಂ, ಅಸೀಮ್ ಸಾಪ್ಟ್ ನೆಟ್ ಕಂಪೆನಿ ಸಹಿತ ವಿವಿಧ ಕಂಪನಿಗಳು ಸಂದರ್ಶನ ನಡೆಸಿದವು.
ಟೆಕ್ಮಹೀಂದ್ರ 321 ಅಭ್ಯಥರ್ಿಗಳನ್ನು ನೇಮಿಸಿದ್ದು, 1.5-12ಲಕ್ಷ ರೂ ವೇತನ ನಿಗದಿಪಡಿಸಿದೆ. ಅಮೇಜಾನ್ ಕಂಪೆನಿ ಒಟ್ಟು 116 ಅಭ್ಯರ್ಥಿಗಳನ್ನು ನೇಮಿಸಿಕೊಂಡಿದ್ದು, ವಾರ್ಷಿಕ ರೂ. 2.2- 3 ಲಕ್ಷ ಮೊತ್ತದ ವೇತನ, ಯುಎಇ ಎಕ್ಸ್ಚೇಂಜ್ ನೇಮಕಗೊಳಿಸಿದ 13 ಅಭ್ಯರ್ಥಿಗಳಿಗೆ ವಾರ್ಷಿಕ 9 ಲಕ್ಷ ರೂ ವೇತನ ನಿಗದಿಪಡಿಸಿದೆ. ನಾರಾಯಣ ಹೃದಯಾಲಾಯ 76 ಅಭ್ಯರ್ಥಿಗಳನ್ನು ನೇಮಕಗೊಳಿಸಿ, 1.5-5 ಲಕ್ಷ ರೂಪಾಯಿ ವೇತನ, ಸ್ಟಾಂಡಡ್ರ್| ಚಾರ್ಟರ್ಡ್ 140 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, 1.8- 3.5 ಲಕ್ಷ ರೂ ವೇತನ ನಿಗದಿಪಡಿಸಿದೆ. ಎನ್ಎಂಸಿ 13 ಅಭ್ಯರ್ಥಿಗಳನ್ನು ಆಯ್ಕೆಮಾಡಿ, 6-6.5 ಲಕ್ಷ ರೂ ವಾರ್ಷಿಕ ವೇತನ ಅವಕಾಶ ನೀಡಿದೆ. ಟೆಸ್ಕೋ 69 ಅಭ್ಯರ್ಥಿಗಳನ್ನು ಆಯ್ಕೆಮಾಡಿ 2.6 ಲಕ್ಷ ರೂ. ವಾರ್ಷಿಕ ವೇತನ, ಬೋಧ್ ಟೆಕ್ನಾಲಜೀಸ್ 11 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ 1.75-9 ಲಕ್ಷ ವಾರ್ಷಿಕ ವೇತನದ ಭರವಸೆ ನೀಡಿದೆ.
ಈ ವರ್ಷದ ಉದ್ಯೋಗ ಮೇಳ ಆನ್ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಿದ್ದು, ಈ ಅವಕಾಶ ಉದ್ಯೋಗಕಾಂಕ್ಷಿಗಳಿಗೆ ನೋಂದಣಿ ಮಾಡಿಕೊಳ್ಳಲು ಅನುಕೂಲವಾಯಿತು. ಆಳ್ವಾಸ್ ಪ್ರಗತಿ 2016ಕ್ಕಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಅಭ್ಯರ್ಥಿ ಗಳಿಗೆ ತಮ್ಮ ಅರ್ಹತೆಗೆ ಅನುಗುಣವಾಗಿ ಇರುವ ಅವಕಾಶಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿತು. ಪ್ರಗತಿ ವೆಬ್ಸೈಟ್ ಭಾಗವಹಿಸುವ ಕಂಪೆನಿಗಳು, ಅವಕಾಶಗಳು, ಆಯ್ಕೆ ಪ್ರಕ್ರಿಯೆ, ಉದ್ಯೋಗ ಸ್ಥಳ ಇತ್ಯಾದಿ ಕುರಿತು ಮುಂಗಡ ಮಾಹಿತಿ ನೀಡಿತು.
ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಪದವಿ ವಿಭಾಗದ ಅಭ್ಯಥರ್ಿಗಳಿಗೆ ವಿದ್ಯಾಗಿರಿಯ ಮುಖ್ಯ ಆವರಣ (ಬ್ಲಾಕ್) ಹಾಗೂ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಭ್ಯರ್ಥಿಗಳಿಗೆ ಪದವಿ ಕಟ್ಟಡವನ್ನು ನಿಗದಿಪಡಿಸಲಾಗಿತ್ತು. ಕ್ಲಾರಿಟಿ ವಾಲ್, ಉದ್ಯೋಗ ಮಾಹಿತಿ ಕೇಂದ್ರ ಹಾಗೂ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆಗಳು ಅಭ್ಯರ್ಥಿಗಳಿಗೆ ಸ್ಪಷ್ಠ ಮಾಹಿತಿ ನೀಡಿವುದರೊಂದಿಗೆ ಉದ್ಯೋಗ ಮೇಳ ಸುಸೂತ್ರವಾಗಿ ಸಾಗಲು ಅನುವು ಮಾಡಿಕೊಟ್ಟಿತು.
ಗ್ರಾಮೀಣ ಅಭ್ಯರ್ಥಿಗಳಿಗೆ ವರದಾನ: ಗ್ರಾಮೀಣ ಪ್ರದೇಶದ ಯುವ ಉದ್ಯೋಗ ಆಕಾಂಕ್ಷಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳನ್ನು ನೀಡುವುದು ಈ ಉದ್ಯೋಗ ಮೇಳದ ಪ್ರಮುಖ ಉದ್ದೇಶವಾಗಿತ್ತು. ಸುಮಾರು ಏಳು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಯುವಜನತೆಗೆ ಉದ್ಯೋಗದ ಮಾಹಿತಿ ಹಾಗೂ ಅವಕಾಶವನ್ನು ತೆರೆದಿಡುವ ನಿಟ್ಟಿನಲ್ಲಿ ಆಳ್ವಾಸ್ ಪ್ರಗತಿ ಫಲಪ್ರದವಾಗಿದೆ.
ನೋಂದಣಿ:
ಆನ್ ಲೈನ್ ನೋಂದಣಿ- 10,864
ಸ್ಥಳದಲ್ಲಿ ನೋಂದಣಿ: 1,974
ಒಟ್ಟು ನೋಂದಣಿ – 12,838
ಮೊದಲ ದಿನದ ಉದ್ಯೋಗ ಆಕಾಂಕ್ಷಿಗಳು- 10,856
ಎರಡನೇ ದಿನದ ಉದ್ಯೋಗ ಆಕಾಂಕ್ಷಿಗಳು- 1,167
ಒಟ್ಟು ಭಾಗವಹಿಸಿದ ಅಭ್ಯರ್ಥಿಗಳು- 12,023
ನೇರ ನೇಮಕಗೊಂಡವರು- 1,209
ಆಯ್ಕೆಗೊಂಡವರು_ 4,744
