ಮೂಡುಬಿದಿರೆ: ಸ್ವರಾಜ್ಯ ಮೈದಾನದಲ್ಲಿ ನಡೆದ ಕೊಲೆಗೆ ಸಂಚು ಪ್ರಕರಣದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಬಜರಂಗದಳ ಕಾರ್ಯಕರ್ತ ದರೆಗುಡ್ಡೆಯ ಸಮಿತ್ ರಾಜ್ ಗೆ ಜಿಲ್ಲಾ ಸೆಶನ್ಸ್ ಕೋರ್ಟ್ ಜಾಮೀನು ನೀಡಿದೆ. ಮೇ 18ರಂದು ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸುತ್ತಿದ್ದಾರೆಂಬ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಂಗಳೂರು ಕುಂಜತ್ತಬೈಲಿನ ನಟರಾಜ್ (25), ರವಿರಾಜ್ (29) ಹಾಗೂ ಕಾವೂರಿನ ಸುಭಾಸ್ ಎಂಬವರನ್ನು ಬಂಧಿಸಿದ್ದರು.
ಈ ಸಂದರ್ಭ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಮಾರುತಿ ಆಮ್ನಿ ದರಗುಡ್ಡೆಯ ಸಮಿತ್ ರಾಜ್ ಗೆ ಸೇರಿದ್ದೆಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೇ 27ರಂದು ಮೂಡುಬಿದಿರೆ ಪೊಲೀಸರು ಸಮಿತ್ ರಾಜ್ ನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದರು.
