ಬಂಟ್ವಾಳ: ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು ಎನ್ನುವ ಸರಕಾರದ ಸುತ್ತೋಲೆ ಇದ್ದರೂ ಪುರಸಭೆಯ ಸಾಮಾನ್ಯ ಸಭೆಗೆ ಯಾವೊಂದು ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಪುರಸಭೆಯ ವಾರ್ಡುಗಳ ಸಮಸ್ಯೆಯ ಬಗ್ಗೆ ಸಭೆಯಲ್ಲಿ ಯಾರಿಗೆ ಹೇಳಲಿ ಎಂದು ಬೇಸರ ವ್ಯಕ್ತಪಡಿಸಿದ ಘಟನೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು. ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
1 (1)
ಪ್ರತಿ ಭಾರಿಯೂ ಅಧಿಕಾರಿಗಳನ್ನು ಪುರಸಭೆಯಿಂದ ಸಭೆಗೆ ನೋಟೀಸ್ ನೀಡಿ ಕರೆದರೂ ಸಭೆಗೆ ಹಾಜರಾಗದೆ ಜನಪ್ರತಿನಿಧಿಗಳಿಗೆ ತಮ್ಮ ವಾರ್ಡುಗಳ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಲ್ಲಿ ಕಷ್ಟವಾಗಿದೆ ಎಂದರು. ಅದಕ್ಕೆ ಪ್ರತ್ಯೇಕವಾಗಿ ಅಧಿಕಾರಿಗಳನ್ನು ಕರೆದು ಸಮಸ್ಯೆಗಳ ಬಗ್ಗೆ ವಿಶೇಷ ಸಭೆ ಕರೆಯುವ ಬಗ್ಗೆ ಸೂಚನೆ ನೀಡಲಾಯಿತು. ಮಳೆಗಾಲದಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಲಾದ ಸ್ಥಳಗಳಲ್ಲಿ ಕೊಳೆತನೀರು ನಿಂತು ನೊಣಗಳು ಮತ್ತು ಸೊಳ್ಳೆಗಳು ಉತ್ಪತ್ತಿಯಾಗುವ ಲಕ್ಷಣಗಳು ಹೆಚ್ಚಿವೆ.
ಅದರಲ್ಲೂ ಬಂಟ್ವಾಳದಲ್ಲಿ ಡೆಂಗ್ಯೂನಂತಹ ಮಾರಕ ರೋಗಗಳು ಇರುವದರಿಂದ ಅಂತಹ ಸ್ಥಳಗಳಿಗೆ ಬ್ಲೀಚಿಂಗ್ ಪೌಡರ್ ಮತ್ತು ಇತರೆ ರಾಸಾಯನಿಕ ವಸ್ತುಗಳನ್ನು ಪುರಸಭೆಯಿಂದ ನೀಡುವುದು ಉತ್ತಮ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ದಿನಕೂಲಿ ನೌಕರರಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಚಚರ್ೆ ನಡೆದು ವಾರ್ಷಿಕ ತಲಾ ಒಂದು ಸಾವಿರ ರೂ ಹೆಚ್ಚುವರಿ ಮಾಡುವಮತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಅಕ್ರಮ ವಾಗಿ ನೀರು ಸಂಪರ್ಕ ಪಡೆದಿರುವವರನ್ನು ಸಕ್ರಮಗೊಳಿಸುವುದು ಮತತು ನೀರಿನ ಬಲ್ನ್ನು ಹೆಚ್ಚುವರಿ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಉಪಾಧ್ಯತಕ್ಷ ಮಹಮ್ಮದ್ ನಂದರಬೆಟ್ಟು ,ಮುಖ್ಯಾಧಿಕಾರಿ ಸುಧಾಕರ ಭಟ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *