ಬಂಟ್ವಾಳ : ಬಂಟ್ವಾಳ ತಾಲೂಕು ರಾಯಿ ಗ್ರಾಮ ಪಂಚಾಯತ್ನಲ್ಲಿ ಜನಪ್ರತಿನಿದಿಗಳನ್ನು ಕಡೆಗಣಿಸಿ ಇಲ್ಲಿನ ಕೈತ್ರೋಡಿ ಕುಡಿಯುವ ನೀರು ಪೂರೈಸುವ ಪಂಪ್ಹೌಸ್ಗೆ ಪಿಡಿಒ ವೆಂಕಟೇಶ್ ಅವರು ಬೀಗ ಜಡಿದ ಪ್ರಕರಣಕ್ಕೆ ಸಂಬಂಸಿದಂತೆ ಸ್ಥಳೀಯ ನಾಗರಿಕರು ಶುಕ್ರವಾರ ಪಂಚಾಯತ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

1 (8)

 

2 (6) 0606pkt1
ಕೈತ್ರೋಡಿ ಪರಿಸರದಲ್ಲಿ ಕುಡಿಯುವ ನೀರು ಪ್ರತೀದಿನ ಸಮರ್ಪಕವಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ನೀರಿನ ಬಿಲ್ಲು ಪಾವತಿಗೆ ಬಾಕಿ ಇರಿಸಿಕೊಂಡಿದ್ದರು. ಇದಕ್ಕಾಗಿ ಪಂಚಾಯತ್ ಅಭಿವೃದ್ಧಿ ಅಕಾರಿ ವೆಂಕಟೇಶ್ ಎಂಬವರು ಗ್ರಾ.ಪಂ. ಅಧ್ಯಕ್ಷರು ಮತ್ತು ಜನಪ್ರತಿನಿಗಳು ಹಾಗೂ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೆ ಕಳೆದ ಬುಧವಾರ ಇಲ್ಲಿನ ಪಂಪ್ಹೌಸ್ಗೆ ಏಕಾಏಕಿ ಬೀಗ ಜಡಿದಿದ್ದರು. ಇದರಿಂದಾಗಿ ಸ್ಥಳೀಯ ಅಂಗನವಾಡಿ ಕೇಂದ್ರ ಸಹಿತ ನೂರಾರು ಮನೆಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಈ ಬಗ್ಗೆ ಆಕ್ರೋಶಗೊಂಡ ಸ್ಥಳೀಯರು ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಪಂಚಾಯತ್ಗೆ ಮುತ್ತಿಗೆ ಹಾಕಿ ಪಿಡಿಒ ವಗರ್ಾವಣೆಗೆ ಆಗ್ರಹಿಸಿದರು. ಕಳೆದ 1 ವರ್ಷದಿಂದ ಸ್ಥಳೀಯ ಬಾಜರ್ಾರು ಕೊಳವೆ ಬಾವಿಯಿಂದ ಕೈತ್ರೋಡಿಗೆ ನೀರು ಪೂರೈಸುವ ಪೈಪ್ಲೈನ್ ಕಾಮಗಾರಿ ಸ್ಥಗಿತಗೊಂಡಿರುವುದನ್ನು ಕೂಡಲೇ ಪೂರ್ಣಗೊಳಿಸಬೇಕು. ಈ ಕಾಮಗಾರಿ ನೆಪದಲ್ಲಿ ಕೈತ್ರೋಡಿ ರಸ್ತೆಯ ಕೆಲವೆಡೆ ಅಗೆದು ಹಾಕಿದ ಪರಿಣಾಮ ಕುಸಿದಿರುವ ಮೋರಿ ದುರಸ್ತಿಗೊಳಿಸಬೇಕು. ಪಂಪ್ಅಪರೇಟರ್ ಬದಲಾಯಿಸಿ ಕೈತ್ರೋಡಿ ಪರಿಸರದಲ್ಲಿ ಪ್ರತಿದಿನ ಕುಡಿಯುವ ನೀರು ಪೂರೈಕೆಯಾಗಬೇಕು. ಇಲ್ಲದಿದ್ದಲ್ಲಿ ಪಂಚಾಯತ್ಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಈ ಹಿಂದೆ ವಿಭಿನ್ನ ಕಾರಣಗಳಿಂದ ಸ್ಥಗಿತಗೊಳಿಸಿರುವ ನಳ್ಳಿ ನೀರಿಗೆ ಮರು ಸಂಪರ್ಕ ನೀಡದೆ ಹಳೆಯ ಬಿಲ್ಲು ಮುಂದುವರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಇತರ ಗ್ರಾ.ಪಂ.ಗಳಿಗಿಂತ ಇಲ್ಲಿ ಹೆಚ್ಚು ದರ ವಸೂಲು ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇವೇಳೆ ಪಿಡಿಒ ಗೈರಿನ ಹಿನ್ನೆಲೆಯಲ್ಲಿ ಇಲ್ಲಿನ ಲೆಕ್ಕಾಕಾರಿ ವಾಲೆಟ್ ಡಿಸೋಜಾ ಮತ್ತು ಪ್ರತಿಭಟನಾಕಾರರೊಂದಿಗೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ತಕ್ಷಣವೇ ಪಂಪ್ಹೌಸ್ಗೆ ಅಳವಡಿಸಿದ ಬೀಗ ತೆರವುಗೊಳಿಸಿ, ಮುಂದಿನ 1 ತಿಂಗಳೊಳಗಾಗಿ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿ ಪ್ರತಿದಿನ ಕುಡಿಯುವ ನೀರು ಪೂರೈಸುವ ಬಗ್ಗೆ ಪಂಚಾಯತ್ನಿಂದ ಭರವಸೆ ದೊರೆತ ಬಳಿಕ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳಲಾಯಿತು.
ಗ್ರಾ.ಪಂ.ಉಪಾಧ್ಯಕ್ಷ ಆನಂದ ಪೂಜಾರಿ, ಸದಸ್ಯ ಚಂದ್ರಶೇಖರ ಗೌಡ, ಪ್ರಮುಖರಾದ ಮೋಹನ್ ಕೆ. ಶ್ರೀಯಾನ್, ಸತೀಶ್ ಆಚಾರ್ಯ, ವಸಂತ ಪೂಜಾರಿ, ಸುರೇಶ್ ಆಚಾರ್ಯ, ಗಂಗಾಧರ ಸುವರ್ಣ, ಕೃಷ್ಣ ಕುಲಾಲ್, ಆಶಾ ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಬಾಕ್ಸ್
ಕೈತ್ರೋಡಿ ಪಂಪ್ಹೌಸ್ಗೆ ಬೀಗ ಹಾಕುವ ಬಗ್ಗೆ ಕಳೆದ ಗ್ರಾಮ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ . ಬಿಲ್ಲು ಪಾವತಿ ಬಾಕಿ ಇರುವುದು ಹೌದಾದರೂ 300 ರೂ.ಕ್ಕಿಂತ ಮೇಲ್ಪಟ್ಟು ಬಾಕಿ ಇರಿಸಿಕೊಂಡವರ ನಳ್ಳಿನೀರು ಸಂಪರ್ಕ ಕಡಿಗೊಳಿಸಲು ಮಾತ್ರ ಸೂಚಿಸಲಾಗಿತ್ತು . ಆದರೆ ಪಂಪ್ಹೌಸ್ಗೆ ಬೀಗ ಜಡಿದಿರುವ ಬಗ್ಗೆ ಪಿಡಿಒ ವೆಂಕಟೇಶ್ ಅವರು ನನಗೆ ಅಥವಾ ಯಾವುದೇ ಸದಸ್ಯರಿಗೆ ಮಾಹಿತಿ ನೀಡಿಲ್ಲ . ರಾಯಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಪಂಪ್ಹೌಸ್ಗಳಿದ್ದು , ಈ ಪೈಕಿ ಕೈತ್ರೋಡಿ ಪಂಪ್ಹೌಸ್ಗೆ ಮಾತ್ರ ಏಕೆ ಬೀಗ ಜಡಿದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಮಧುಕರ ಬಂಗೇರ ಪ್ರತಿಕ್ರಿಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *