ಕೈಕಂಬ: ವಳಚ್ಚಿಲ್‍ನಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು, ಇಂದು ಮತ್ತೊಂದು ಅಪಘಾತ ನಡೆದು ಓರ್ವ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಬಾರಿ ನಡೆದಿರುವುದು ಆಲ್ಟೋ ಕಾರ್ ಹಾಗೂ ಕೆಎಸ್‍ಆರ್‍ಟಿಸಿ ಬಸ್ ಮಧ್ಯೆ.

ಮಂಗಳೂರು-ಬೆಂಗಳೂರು ಹೆದ್ದಾರಿಯಾಗಿರುವ ವಳಚ್ಚಿಲ್ ಎಂಬಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗೆ ಆಲ್ಟೋ ಕಾರ್‍ಗೆ ಗುದ್ದಿ ಈ ಅಪಘಾತ ನಡೆದಿದ್ದು, ಕಾರ್ ಡ್ರೈವರ್ ಆಗಿದ್ದ ವಸಂತ್ ಕುಮಾರ್(64) ಎನ್ನುವವರು ಮೃತಪಟ್ಟಿದ್ದಾರೆ.
ಈ ಹಿಂದೆ ಇದೇ ಪರಿಸರದಲ್ಲಿ ಬೃಹತ್ ಗಾತ್ರದ ಕಂಟೈನರ್ ಲಾರಿ ಕಾರ್ ಹಾಗೂ ರಿಕ್ಷಾಗಳಿಗೆ ಬಿದ್ದ ಪರಿಣಾಮ ಹಲವರು ಮೃತಪಟ್ಟು ಹಲವರು ಗಂಭೀರ ಗಾಯಗೊಂಡಿದ್ದರು. ದುಸ್ವಪ್ನವೆಂಬಂತೆ ಇದೇ ಜಾಗದಲ್ಲಿ ಮತ್ತೆ ಅಪಘಾತ ನಡೆದಿದೆ. ಗ್ರಾಮಾಂತರ ಹಾಗೂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

