ವಾಮಂಜೂರು: 2016-17 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಘಟಕ, ವಿವಿಧ ಪಠ್ಯೇತರ ಚಟುವಟಿಕೆಗಳ ಘಟಕ ಮತ್ತುರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭವು ಜೂನ್ 24 ಶುಕ್ರವಾರದಂದು ಸೈಂಟ್ ರೇಮಂಡ್ಸ್ ಪದವಿ ಪೂರ್ವಕಾಲೇಜಿನಲ್ಲಿ ನಡೆಯಿತು.
ವಿದ್ಯಾರ್ಥಿ ಘಟಕದ ಉದ್ಘಾಟಕರಾಗಿ ಆಗಮಿಸಿದ್ದ ಧರ್ಮಪಾಲ್, ಹೆಡ್‍ಕಾನ್‍ಸ್ಟೆಬಲ್, ಕಮೀಷನರ್‍ಕಛೇರಿ ಮಂಗಳೂರು, ರವರು ವಿದ್ಯಾರ್ಥಿಜೀವನದಲ್ಲಿ ನಾಯಕತ್ವಗುಣ ಪ್ರಮುಖವಾದದ್ದು ಮತ್ತು ಅದನ್ನು ಪಡೆದುಕೊಳ್ಳಲು ಸನ್ಮಾರ್ಗದಲ್ಲಿ ನಡೆಯಬೇಕು ಮತ್ತು ದುಶ್ಚಟಗಳ ದಾಸರಾಗದೇ ಆರೋಗ್ಯವಂತ ಸಮಾಜಕ್ಕಾಗಿ ನಾವು ಶ್ರಮಿಸಬೇಕು ನುಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮತ್ತುರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟಕರಾಗಿ ಆಗಮಿಸಿದ್ದ ವಿವೇಕಾನಂದ ಕಾಲೇಜು ಪುತ್ತೂರುಇದರ ಸ್ನಾತಕೋತ್ತರ ವಿಭಾಗದಉಪನ್ಯಾಸಕರಾದ ಪೆÇ್ರ. ಹರಿಪ್ರಸಾದ್ ಎನ್ ಇವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಪುಸ್ತಕಗಳಿಂದ ದೊರೆಯುವ ಶಿಕ್ಷಣ ಸಮಾಜದಲ್ಲಿ ಸ್ನಾನಮಾನವನ್ನು ಒದಗಿಸಿದರೆ ಪಠ್ಯೇತರವಾಗಿದೊರೆಯುವ ಶಿಕ್ಷಣ ಜೀವನದ ಮೌಲ್ಯವನ್ನು ತಿಳಿಸಿಕೊಡುತ್ತದೆ, ಅಂತಹ ಮೌಲ್ಯಧಾರಿತ ಶಿಕ್ಷನಕ್ಕಾಗಿ ವಿದ್ಯಾಭ್ಯಾಸದಜೊತೆಗೆರಾಷ್ಟ್ರೀಯ ಸೇವಾ ಯೋಜನೆಯಂತಹ ಯೋಜನೆಗಳು ಮಹತ್ತರ ಪಾತ್ರ ವಹಿಸುತ್ತದೆಎಂದರು.
ಕಾರ್ಯಕ್ರಮದಲ್ಲಿ ನೇಚರ್‍ಕ್ಲಬ್, ಭಾಷಾಕ್ಲಬ್, ವಾಣಿಜ್ಯಕ್ಲಬ್, ವೈಎಸ್‍ಎಮ್‍ಕ್ಲಬ್, ಕಲಾ ಕ್ಲಬ್ ಗಳನ್ನು ಉದ್ಘಾಟಿಸಲಾಯಿತು
ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಎಲ್ಲಾಘಟಕದ ನಾಯಕ ನಾಯಕಿಯರಿಗೆ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಭಗಿನಿ ಸಾಧನರವರು ವಿದ್ಯಾರ್ಥಿಜೀವನದಲ್ಲಿ ಬರುವಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಎಲ್ಲಾ ಕಷ್ಟ-ನಷ್ಟಗಳನ್ನು ಮೆಟ್ಟಿನಿಂದು ಸಮಾಜಕ್ಕೆಆದರ್ಶ ವ್ಯಕ್ತಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಶುಭ ನುಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಘಟಕದ ನಾಯಕಧನುಷ್‍ಎಸ್, ನಾಯಕಿ ದೀಪ್ತಿ ಎಲ್, ಕಾರ್ಯದರ್ಶಿಗಳಾದ ರಚನಾ, ಪ್ರಜ್ವಲ್, ಕ್ರೀಡಾ ಕಾರ್ಯದರ್ಶಿಗಳಾದ ರೋಹನ್, ತುಳಸಿ, ಸಾಂಸ್ಕೃತಿಕಕಾರ್ಯದರ್ಶಿಗಳಾದ ಸುಶ್ಮಿತಾ, ಧನುಷ್, ಎನ್.ಎಸ್.ಎಸ್‍ಘಟಕ ನಾಯಕ ನಾಯಕಿರಾದಇಬ್ರಾಹಿಂ ಬಾದ್‍ಷಾ ಮತ್ತು ಬಿಂದ್ಯಾ, ಕಾರ್ಯದರ್ಶಿಗಳಾದ ಅರ್ಪಿತ್, ಪೂಜಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಆಕಾಶ್, ಭವ್ಯ ಹಾಗೂ ಕಾಲೇಜಿನಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕಕಾರ್ಯಕ್ರಮ ನಡೆಯಿತು.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವಸೀಲಾ ಸ್ವಾಗತಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಹಾಗು ವಿದ್ಯಾರ್ಥಿಘಟಕದ ಕಾರ್ಯದರ್ಶಿಯಾದ ರಚನಾ ವಂದಿಸಿ, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಹೀಶಾ ಕಾರ್ಯಕ್ರಮ ನಿರೂಪಿಸಿದರು.


