ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆ ವಲಯದ ಆರನೇ ವರ್ಷದ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ರವಿವಾರ ಸಮಾಜ ಮಂದಿರದಲ್ಲಿ ನಡೆಯಿತು. ಕಚ್ಚೂರು ನಾಗೇಶ್ವರ ದೇವಾಸ್ಥಾನ ಮತ್ತು ಸೇವಾ ಟ್ರಸ್ಟ್ನ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೀವನದಲ್ಲಿ ಧ್ಯೇಯ ಮತ್ತು ಸಾಧನೆ ಮಾಡುವ ಗುರಿ ಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಅತ್ಯಗತ್ಯ. ಶಿಕ್ಷಣ ಕ್ಷೇತ್ರದಲ್ಲಿ ಇಂದು ಪರಿವರ್ತನೆಗಳಾಗಿವೆ.
ಮಕ್ಕಳು ಯಾವುದೇ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯಲಿ ಆದರೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವಂತಹ ಕೆಲಸಗಳಾದರೆ ಉತ್ತಮ. ನಾವು ನಮ್ಮ ಸಮಾಜದಲ್ಲಿ ದುಡಿದು ಹಣ ಮಾತ್ರ ಮಾಡಿದರೆ ಸಾಲದು. ಅಥವಾ ನಾವು ಸಮಾಜದಿಂದ ಪಡೆದರೆ ಮಾತ್ರ ಸಾಲದು ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡುವಂತಾಗಬೇಕು ಹಾಗೂ ಸಂಘವನ್ನು ಗಟ್ಟಿಗೊಳಿಸಬೇಕು ಎಂದು ಹೇಳಿದ ಅವರು ಮುಂದಿನ ತಿಂಗಳಲ್ಲಿ ಸಂಘದ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ಸಮಾಜ ಬಾಂಧವರು ಕೈಜೋಡಿಸಬೇಕೆಂದು ಆಗ್ರಹಿಸಿದರು. ಮೂಡುಬಿದಿರೆ ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಾಧವ ಭಂಡಾರಿ ಕಾನ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ : ಸಾಧಕರಾದ ಕಚ್ಚೂರು ನಾಗೇಶ್ವರ ದೇವಾಸ್ಥಾನ ಮತ್ತು ಸೇವಾ ಟ್ರಸ್ಟ್ನ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ, ಭಂಡಾರಿ ಮಹಾಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ, ಪುಸ್ತಕದ ಪಾಯೋಜಕಿ, ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆಯ ಗೌರವಾಧ್ಯಕ್ಷೆ ವಸಂತಿ ಜಯ ಭಂಡಾರಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಧವನ್ನು ದಾಖಲಿಸಿರುವ ಶೃತಿಕಾ (97.30%), ಶರಣಿಕ್ (92.16%) ಹಾಗೂ ವರುಣ್ ವೈ.ಭಂಡಾರಿ (91.63%) ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿ ವೇತನ : 26 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಜಯ ಭಂಡಾರಿ ಅವರ ಸ್ಮರಣಾರ್ಥ 150 ವಿದ್ಯಾಥರ್ಿಗಳಿಗೆ 40,000 ಮೌಲ್ಯದ ಪುಸ್ತಕ ಮತ್ತು ಕೊಡೆಗಳನ್ನು ವಿತರಿಸಲಾಯಿತು.
ಪುರಸಭಾ ಸದಸ್ಯ ಪ್ರಸಾದ್ ಕುಮಾರ್, ಭಂಡಾರಿ ಮಹಾ ಮಂಡಲ (ರಿ)ದ ಪ್ರಧಾನ ಕಾರ್ಯದರ್ಶಿ ಯು.ಸತೀಶ್ ಭಂಡಾರಿ, ಬೆಂಗಳೂರು ಭಂಡಾರಿ ಸಂಘದ ಅಧ್ಯಕ್ಷ ಸುಧಾಕರ ಬನ್ನಂಜೆ, ಚಲನಚಿತ್ರ ನಟ ಶೇಖರ ಕಾರ್ಕಳ, ಮೂಡುಬಿದಿರೆ ಸಂಘದ ಸ್ಥಾಪಕಾಧ್ಯಕ್ಷ ಎಂ.ಆರ್.ಭಂಡಾರಿ, ಕಚ್ಚೂರು ನಾಗೇಶ್ವರ ದೇವಾಸ್ಥಾನ ಮತ್ತು ಸೇವಾ ಟ್ರಸ್ಟ್ನ ಟ್ರಸ್ಟಿ ಪ್ರಶಾಂತ್ ಭಂಡಾರಿ ಪುತ್ತಿಗೆ, ಉದ್ಯಮಿ ಕೆ.ಎನ್.ಪ್ರಕಾಶ್ ಭಂಡಾರಿ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸತೀಶ್ ಭಂಡಾರಿ ಕರಿಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಭಂಡಾರಿ ಅಲಂಗಾರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಭಂಡಾರಿ ಸಂಘದಿಂದ ನೃತ್ಯ ಹಾಗೂ ವಿವಿಧ ವಿನೋದಾವಳಿಗಳು, ದುರ್ಗಾಂಬ ಮಹಿಳಾ ಯಕ್ಷಗಾನ ಮಂಡಳಿ ತಂಡಬೈಲು ಸುರತ್ಕಲ್ ಇವರಿಂದ ಯಕ್ಷಗಾನ ತಾಳಮದ್ದಲೆ ನಡೆಯಿತು.
