ಬಂಟ್ವಾಳ: ಇಲ್ಲಿನ ನಗರ ಪೊಲೀಸ್ ಠಾಣೆಯ ವತಿಯಿಂದ ಮಾದಕದ್ರವ್ಯ ಹಾಗೂ ಅಕ್ರಮ ಸಾಗಾಟ ಮತ್ತು ಮಕ್ಕಳ ಶೋಷಣೆ, ಲೈಂಗಿಕ ಶೋಷಣೆ, ಪೋಕ್ಸೋ ಕಾಯಿದ ಬಗ್ಗೆ ಜಾಗೃತಿ ಕಾರ್ಯಕ್ರಮ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನಲ್ಲಿ ಸೋಮವಾರ ನಡೆಯಿತು.
ಮಕ್ಕಳ ಕಲ್ಯಾಣ ಸಮಿತಿಯ ಉಮೇಶ್ ನಿರ್ಮಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಲೈಂಗಿಕ ದೌಜ್ರ್ಯನ್ಯಗಳು ನಡೆದಾಗ ವಿದ್ಯಾರ್ಥಿಗಳು ಯಾವುದೇ ಕೀಳರಿಮೆ ಒಳಗಾಗದೆ ಅದನ್ನು ತಮ್ಮ ಪೋಷಕರಲ್ಲಿ ಅಥವಾ ಅಧ್ಯಾಪಕರಲ್ಲಿ ತಿಳಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಪ್ರಾಪ್ತ ಬಾಲಕಿಯರು ಇಂತಹ ತೊಂದರೆಗೊಳಗಾದಗ ತಕ್ಷಣ ಕಾರ್ಯರಪವೃತರಾದರೆ ಆರೋಪಿಯನ್ನು ಕಾನೂನಿನಡಿ ಶಿಕ್ಷೆಗೊಳಪಡಿಸಲು ಸಾಧ್ಯವಿದೆ ಎಂದರು. ಮಾದಕದ್ಯವ್ಯ ಸೇವನೆಯಿಂದಾಗುವ ತೊಂದರೆ ಹಾಗೂ ಅಕ್ರಮ ಸಾಗಾಟದ ಬಗ್ಗೆ ಮಾಹಿತಿ ನೀಡಿದರು.

ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನೀರೀಕ್ಷಕ ನಂದಕುಮಾರ್ ಮಾತನಾಡಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಚಟಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿಕೊಳ್ಳಬೇಕು. ಡ್ರಗ್ಸ್ ಮಾರಾಟ ಜಾಲಗಳ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿಕೊಂಡರು.
ಎಎಸೈ ಸೇಸಮ್ಮ, ಸಂಚಾರಿ ಠಾಣಾ ಎಎಸೈ ರಾಮನಾಯ್ಕ ವೇದಿಕೆಯಲ್ಲಿದ್ದರು. ಸಿಬ್ಬಂದಿಗಳಾದ ಕೃಷ್ಣ ಕುಲಾಲ್, ಗುಪ್ತಚರ ವಿಭಾಗದ ಶ್ರೀಧರ್ ಉಪಸ್ಥಿತರಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಕಲ ಕೆ. ಸ್ವಾಗತಿಸಿದರು, ವಿದ್ಯಾರ್ಥಿ ನಾಯಕಿ ಶರಣ್ಯ ವಂದಿಸಿದರು. ಉಪನ್ಯಾಸಕ ಚೇತನ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
