ಕೈಕಂಬ: ಜೋರು ಮಳೆ ಬಂದರೆ ಕೈಂಬದಲ್ಲಿ ಅಕ್ಷರಶಃ ನೆರೆ ಪರಿಸ್ಥಿತಿ ಉಂಟಾಗುತ್ತದೆ. ಕೈಕಂಬ ಜಂಕ್ಷನ್ಗೆ ಹಲವು ಕಡೆಗಳಿಂದ ನುಗ್ಗುವ ನೀರು ಜಂಕ್ನನ್ನಿಂದ ಹರದು ಬಂದು ಕೈಕಂಬ ಮಾರುಕಟ್ಟೆಯಾಗಿ ರಸ್ತೆಯ ಮೇಲೆಯೇ ಸರಿದು ಆತಂಕಕ್ಕೆ ಕಾರಣವಾಗಿದೆ. ಕೈಕಂಬದಲ್ಲಿರುವ ಒಳಚರಂಡಿಯಲ್ಲಿ ಹರಿಯಬೇಕಿದ್ದ ನೀರು ರಸ್ತೆಯ ಮೇಲೆ ಹರಿದಾಡುವುದರಿಂದಲೇ ಈ ರೀತಿಯ ದುಸ್ಥಿತಿಗೆ ಕಾರಣ. ಯಾಕೆಂದರೆ ಒಳಚರಂಡಿ ಸಂಪೂರ್ಣವಾಗಿ ಭರ್ತಿಯಾಗಿದ್ದು ಜೋರು ಮಳೆ ಬಂದರೆ ಚರಂಡಿ ನೀರು ಮಳೆ ನೀರನೊಂದಿಗೆ ಸೇರಿಕೊಂಡು ಕೈಕಂಬವೆಲ್ಲಾ ಗಬ್ಬೆನ್ನಲು ಕಾರಣವಾಗಿದೆ.


ಕಳೆದ ಬಾರಿಯೂ ಇದೇ ಪರಿಸ್ಥಿತಿ ಇದ್ದು ಸಂಬಂಧಪಟ್ಟವರಿಗೆ ದೂರು ನೀಡಲಾಗಿತ್ತಾದರೂ ನೆರೆ ನೀರಿಗೆ ಯಾವುದೇ ವ್ಯವಸ್ಥೆಯನ್ನುಕೈಗೊಳ್ಳಲಾಗಿಲ್ಲ. ಈಗೆ ಇದೇ ಪರಿಸ್ಥಿತಿ ಮತ್ತೆ ಪುನರಾವರ್ತನೆಗೊಂಡಿರುವುದರಿಂದ ಜೊರು ಮಳೆ ಬಂದರೆ ಕೈಕಂಬವೆಲ್ಲಾ ಜಲಾವೃತವಗುತ್ತದೆ.
ಕೈಕಂಬದ ಬಗ್ಗೆ ಸರಕಾರಕ್ಕೆ ಯಾಕೆ ಈ ರೀತಿಯ ನಿರ್ಲಕ್ಷ್ಯ ಎಂದೇ ಅರ್ಥವಾಗುವುದಿಲ್ಲ. ಮುಖ್ಯವಗಿ ಕೈಕಂಬವು ನಾಲ್ಕು ಪಂಚಾಯತ್ಗಳಿಗೆ ಹಂಚಿಹೋಗಿದೆ. ಗಂಜಿಮಠ, ಪೆರಾರ, ಗುರುಪುರ ಹಾಗೂ ಕಂದಾವರ ಗ್ರಾಮ ಪಂಚಾಯತ್ಗಳಿಗೆ ಒಂದೊಂದು ಭಾಗ ಹಂಚಿಹೋಗಿರುವುದರಿಂದ ಯಾವ ಪಂಚಯತ್ ಕೂಡಾ ಕೈಕಂಬದ ಸಮಸ್ಯೆಯ ನಿವಾರಣೆಗೆ ಕ್ರಮ ಕೈಗೊಂಡಿಲ್ಲ. ಕೈಕಂಬ ಒಂದು ಭಾಗದಲ್ಲಿ ಸಮಸ್ಯೆಯಾದರೆ ಅದು ಆ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ ಎಂಬ ಪಂಚಾಯತ್ ಅಧ್ಯಕ್ಷರ ನಿರ್ಲಕ್ಷ್ಯದಿಂದ ಕೈಕಂಬದ ಸಮಸ್ಯೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಮುಖ್ಯವಾಗಿ ಪಾರ್ಕಿಂಗ್ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ. ರಿಕ್ಷಾ ನಿಲ್ದಾಣ ಇತ್ಯಾದಿ ಸಮಸ್ಯೆಗಳು ಕೈಕಂಬವನ್ನು ಕಾಡುತ್ತದೆ.
ಕನಸಾಗಿಯೇ ಉಳಿದ ಕೈಕಂಬ ಪುರಸಭೆ ಯೋಜನೆ
ಗುರುಪುರ ಕೈಕಂಬವನ್ನು ಪುರಸಭೆಯ ವ್ಯಾಪ್ತಿಗೆ ಕರೆತರಬೇಕೆಂದು ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ಅವರು ಭರವಸೆ ನೀಡಿದ್ದರು. ಈ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಕೈಕಂಬವನ್ನು ಪುರಸಭೆ ವ್ಯಾಪ್ತಿಗೆ ತಂದು ಇಲ್ಲಿನ ಸಮಸ್ಯೆಗಳಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿರುವುದು ಹೇಳಿಕೆಯಲ್ಲೇ ಉಳಿದಿದೆ.
ಶಾಶ್ವತ ಪರಿಹಾರಕ್ಕೆ ಕ್ರಮ: ಯು.ಪಿ ಇಬ್ರಾಹಿಂ
ಕೈಕಂಬದಲ್ಲಿರುವ ಸಮಸ್ಯೆಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಯುಪಿ ಇಬ್ರಾಹಿಂ ಅವರು ಮಾತನಾಡಿ ಕೈಕಂಬಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಳಚರಂಡಿಯ ಬಗ್ಗೆ ಕೈಕಂಬದಲ್ಲಿರುವ ಅಂಗಡಿ ಮಾಲಿಕರ ಸಭೆಯ ಕರೆಯಲಾಗಿದ್ದು ಈ ಬಗ್ಗೆ ಚರ್ಚಿಸಲಾಗಿತ್ತು. ಇನ್ನು ಮುಂದೆ ಮತ್ತೊಂದು ಸುತ್ತಿನ ಸಭೆ ಕರೆದು ಚರಂಡಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗುವುದು. ಡ್ರೈನೇಜ್ ನೀರು ಇಂಗುವಂತೆ ಮಾಡಲು ವ್ಯವಸ್ಥೆ ಮಾಡಲಿದೆ. `ಕೈಕಂಬ ಡೆವಲೆಪ್ಮೆಂಟ್ ಯೋಜನೆ’ ಎಂಬ ಹೆಸರಲ್ಲಿ ಪಾರ್ಕಿಂಗ್ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ
