ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಇದೇ ಬರುವ ಜೂನ್ 26ರಿಂದ 29ರವರೆಗೆ ನಡೆಯಲಿದೆ. ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಕಾಶೀಮಠಾಧೀಶರಾಗಿ ಪೀಠಾರೋಹಣಗೈದ ಬಳಿಕ ಮಠಾಧಿಪತಿಯಾಗಿ ಮೂಡುಬಿದಿರೆಯಲ್ಲಿ ಇದು ಮೊದಲ ಮೊಕ್ಕಾಂ ಆಗಿದೆ.
ಜೂನ್ 26ರ ಸಂಜೆ 6.30ಕ್ಕೆ ಉಳ್ಳಾಲ ಮೊಕ್ಕಾಂನಿಂದ ಶ್ರೀಗಳವರು ಮೂಡುಬಿದಿರೆ ಪುರ ಪ್ರವೇಶ ಮಾಡಲಿದ್ದಾರೆ. ಇಲ್ಲಿನ ಮುಖ್ಯರಸ್ತೆಯ ಶ್ರೀ ಹನುಮಂತ ದೇವಸ್ಥಾನದ ಬಳಿಯಿಂದ ಶ್ರೀಗಳವರನ್ನು ದೇವಳಕ್ಕೆ ಸ್ವಾಗತಿಸಲಾಗುತ್ತದೆ. ರಾತ್ರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ದೀಪಾಲಂಕಾರ ಪೂಜೆ, ಶ್ರೀಗಳವರ ಆಶೀರ್ವಚನ ನಡೆಯಲಿದೆ.

ಮೊಕ್ಕಾಂ ಅವಧಿಯಲ್ಲಿ ಗುರು ಭಿಕ್ಷಾ ಸೇವೆ, ವಿವಿಧ ಭಜನಾ ಮಂಡಳಿಗಳವರಿಂದ ಸಂಕೀರ್ತನೆ, ಜೂನ್ 28ರಂದು ಸಂಜೆ 7ಕ್ಕೆ ಮೂಡುವೇಣುಪುರ ಜಿ.ಎಸ್.ಬಿ.ಸಮಾಜದ ‘ಸಂಪರ್ಕ 2016’ಸಂಪುಟ ಬಿಡುಗಡೆ ನಡೆಯಲಿದೆ. ಜೂನ್ 29ರ ಸಂಜೆ ಶ್ರೀಗಳವರ ಆಶೀರ್ವಚನ, ಬಳಿಕ ಶ್ರೀಗಳವರನ್ನು ಮುಂದಿನ ಶಿರಾಲಿ ಮೊಕ್ಕಾಂಗೆ ಬೀಳ್ಕೊಡಲಾಗುತ್ತದೆ
