ಬಂಟ್ವಾಳ :ತಾಲೂಕಿನ ಉಳಿ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢ ಶಾಲೆಯ ಸ್ಥಾಪನಾ ದಿನಾಚರಣೆ ಪ್ರಯುಕ್ತ ಶ್ರೀ ಸತ್ಯಸಾಯಿ ಸೇವಾಸಮಿತಿ ಮತ್ತು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ದಾನಿಗಳು ವಿದ್ಯಾರ್ಥಿಗಳಿಗೆ ಕೊಡ ಮಾಡಿದ ಸುಮಾರು 1ಲ.ರೂ.ಮೊತ್ತದ ಸಮವಸ್ತ್ರ ಮತ್ತು ಲೇಖನ ಸಾಮಾಗ್ರಿ ವಿತರಣೆ ಹಾಗೂ 2105-16ರ ಎಸೆಸೆಲ್ಸಿ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಸೋಮವಾರ ಕಕ್ಯಬೀಡು ಪ್ರೌಢ ಶಾಲಾ ಸಂಭಾಗಣದಲ್ಲಿ ಜರಗಿತು.
ವಿರಾಜ್ಪೇಟೆ ಪ್ರಾಂಶುಪಾಲ ಮಧುಸೂದನ ನಾಯಕ್ ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ ರಾಷ್ಟ್ರೀಯ ಮಾಧ್ಯಮದ ಏಕ ರೂಪದ ಶಿಕ್ಷಣ ಪದ್ಧತಿ ಅಳವಡಿಸುವುದು ಇಂದಿನ ಆವಶ್ಯಕತೆಯಾಗಿದೆ. ಉದ್ಯೋಗಕ್ಕಾಗಿ ಶಿಕ್ಷಣವಲ್ಲ, ಪದವಿಗಾಗಿ ಶಿಕ್ಷಣವಲ್ಲ.ಬದಲಾಗಿ ವಿದ್ಯಾರ್ಥಿಗಳಲ್ಲಿರುವ ಅಂತಃಶಕ್ತಿಯನ್ನು ಬೆಳಗಿಸುವುದೇ ಶಿಕ್ಷಣ . ಉತ್ತಮ ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ.ಶಿಕ್ಷಣದ ಜೊತೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಾಲಾ ಸಂಚಾಲಕ ಕೆ.ಜಾರಪ್ಪ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ 27 ವರ್ಷಗಳ ಹಿಂದೆ ತೀರ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಸರಕಾರಿ ಅನುದಾನವಿಲ್ಲದೆ ಊರಿನ ಅಭಿವೃದ್ಧಿಗಾಗಿ ಶಾಲೆಯನ್ನು ಸ್ಥಾಪಿಸಿದ್ದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಊರವರ ಶ್ರದ್ಧೆ ,ಪ್ರೀತಿಯಿಂದ ಶಾಲೆ ಬೆಳೆದು ಬಂದಿದೆ.ಇದೀಗ ಸರಕಾರಿ ಅನುದಾನ ದೊರಕಿದ್ದು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣದ ಸರ್ವ ಸೌಲಭ್ಯಗಳನ್ನು ಒದಗಿಸುವಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ನಾವು ಕೊಡುಗೈಯಿಂದ ನೀಡಿದಾಗ ನಮಗೆ ಸಹಾಯ ದೊರಕುತ್ತದೆ ಎಂದು ಹೇಳಿದರು.
ಸರಪಾಡಿ ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ಕಕ್ಯಬೀಡು ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮುಡತ್ತಾಯ,ತಾ.ಪಂ. ಸದಸ್ಯೆ ಬೇಬಿ ಕೃಷ್ಣಪ್ಪ,ಗ್ರಾ.ಪಂ. ಅಧ್ಯಕ್ಷೆ ದೀನಾಕ್ಷಿ,ಕಕ್ಯಪದವು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎ. ಚೆನ್ನಪ್ಪ ಸಾಲಿಯಾನ್ ,ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ, ಉಳಿ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ರಾಮ ಪಿ.ಸಾಲಿಯಾನ್, ಉದ್ಯಮಿ ಗುಣಶೇಖರ ಕೊಡಂಗೆ, ಉಳಿಬೈಲು ದ.ಕ.ಜಿ.ಪ.ಹಿ.ಪ್ರಾ.ಶಾಲೆ ಸಹಶಿಕ್ಷಕ ಅಕ್ಬರ್ ಆಲಿ ,ಮಣಿನಾಲ್ಕೂರು ಸೇ.ಸ.ಬ್ಯಾಂಕ್ ಸಿಬಂದಿ ಯಶೋಧರ ಗೌಡ,ಗ್ರಾ.ಪಂ.ಸದಸ್ಯರಾದ ಸಂಜೀವ ಗೌಡ ಅಗ್ಫಲ,ಚಿದಾನಂದ ರೈ, ಉಳಿ ಸೇ.ಸ.ಬ್ಯಾಂಕ್ ಉಪಾಧ್ಯಕ್ಷ ವಾಸುದೇವ ಮಯ್ಯ,ಮಾಜಿ ಕಾರ್ಯನಿರ್ವಹಣಾಕಾರಿ ನಾರಾಯಣ ರೈ ಅವರು ವೇದಿಕೆಯಲ್ಲಿದ್ದರು
ಶ್ರೀ ಸತ್ಯಸಾಯಿ ಸೇವಾ ಮಹಿಳಾ ಸಮಿತಿ ಅಧ್ಯಕ್ಷೆ ವೀಣಾ ಜೆ.ಶೆಟ್ಟಿ,ಶಾಂಭವಿ ಜೆ.ಶೆಟ್ಟಿ , ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಮೇನೇಜರ್ ವೀರೇಂದ್ರ ಕುಮಾರ್ ಜೈನ್,ನಿವೃತ್ತ ಶಿಕ್ಷಕ ಮುತ್ತಪ್ಪ ಗೌಡ, ಉಳಿ ಸೇ.ಸ.ಬ್ಯಾಂಕ್ ಮೇನೇಜರ್ ನಾರಾಯಣ,ಪ್ರಮುಖರಾದ ರಾಮಯ್ಯ ಭಂಡಾರಿ,ಚೇತನ್,ಜೀರ್ಣೋದ್ಧಾರ ಸಮಿತಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಸಾಧಕರಾದ ಸೌಜನ್ಯ,ಅಬ್ದುಲ್ ತಮೀಮ್ ,ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ತಾ.ಪಂ.ಸದಸ್ಯೆ ಬೇಬಿ ಕೃಷ್ಣಪ್ಪ ಅವರನ್ನು ಸಮ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ ಅವರು ಸ್ವಾಗತಿಸಿದರು.ಕಕ್ಯಬೀಡು ಶ್ರೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ದಾಮೋದರ ನಾಯಕ್ಅವರು ವಂದಿಸಿದರು. ಶಿಕ್ಷಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
