ಬಂಟ್ವಾಳ: ಬಿ.ಸಿ.ರೋಡು ಹಾಗೂ ಬಂಟ್ವಾಳದಲ್ಲಿ ಸುಗಮ ಸಂಚಾರ ನಿರ್ವಹಿಸುವ ನಿಟ್ಟಿನಲ್ಲಿ ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಬಿ.ಸಿ.ರೋಡಿನ ರಕ್ತೇಶ್ವರೀ ದೇವಿ ದೇವಸ್ಥಾಮದ ಮಿನಿ ಹಾಲ್ನಲ್ಲಿ ಮಂಗಳವಾರ ಸಮಾಲೋಚನಾ ಸಭೆ ನಡೆಯಿತು. ಬಿಸಿರೋಡ್ ಮತ್ತು ಬಂಟ್ವಾಳ ಪೇಟೆಯ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಆಯೋಜಿಸಿದ್ದ ಸಮಾಲೋಚನೆ ಸಭೆ ಯಾವುದೇ ಸ್ಪಷ್ಟವಾದ ಪರಿಹಾರ ಕಾಣೆದೆ ಠುಸ್ಸಾಯಿತು. ಈ ರೀತಿಯ ಸಭೆಗಳು ಬಿಸಿರೋಡಿನಲ್ಲಿ ಇದೇ ಮೊದಲ ಸಲವಲ್ಲ. ಇಲ್ಲಿಗೆ ಹೊಸತಾಗಿ ಬಂದ ಎಲ್ಲಾ ಉನ್ನತ ಅಧಿಕಾರಿಗಳು ಸಭೆ ನಡೆಸಿ ಕೊನೆಗೆ ಸಪ್ಪೆ ಮುಖ ಮಾಡಿ ಹಿಂದುರುಗಿದ್ದು ಬಿಟ್ಟರೆ ಶಾಶ್ವತ ಪರಿಹಾರ ಕಾಣಲು ಸಾದ್ಯವಾಗಿಲ್ಲ. ಅದಕ್ಕೆ ಇಲ್ಲಿನ ರಾಜಕೀಯ , ಜಮೀನಿನ ಕೊರತೆ, ಸ್ಥಳೀಯ ಆಡಳಿತದ ಮನಸ್ಸು , ಸಾರ್ವಜನಿಕರ ಸಹಕಾರ ಎಲ್ಲವೂ ಕೊರತೆಯಾಗಿದೆ ಎನ್ನಬಹುದು.

ಇಂದು ನಡೆದ ಸಭೆಯಲ್ಲಿ ರಿಕ್ಷಾ ಚಾಲಕರ ಮತ್ತು ಟೆಂಪೋ ಚಾಲಕರ ವೈಯಕ್ತಿಕ ವಿಷಯಗಳಿಗೆ ಮೀಸಲಾಯಿತು. ಅನಾವಶ್ಯಕ ಮಾತು ಗದ್ದಲಗಳಿಗೆ ಸಮಯ ವ್ಯರ್ಥವಾಯಿತು. ತಾತ್ಕಾಲಿಕ ಅಂತ್ಯ ಕಾಣದೆ ಸಭೆ ವಿಷಯಾಂತರಗೊಳ್ಳುವುದನ್ನು ಮನಗಂಡ ಬಂಟ್ವಾಳ ಗ್ರಾಮಾಂತರ ಎಸೈ ರಕ್ಷಿತ್ ಗೌಡ ಈ ರೀತಿಯ ಗೊಂದಲದ ಸಭೆಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಭೆಗೆ ಅನಾವಶ್ಯಕ ಜನರು ಬಂದು ವಿಷಯಾಂತರ ಮಾಡುವುದರಿಂದ ಯಾವುದೇ ಲಾಭವಿಲ್ಲ. ಸಾರ್ವಜನಿಕರು , ಎಲ್ಲಾ ಸಂಘಟನೆಗಳ ಹಾಗೂ ವರ್ತಕರು ಮತ್ತು ಅಧಿಕಾರಿಗಳನ್ನು ಒಳಗೊಂಡ ಒಂದು ಸಮಿತಿಯನ್ನು ರಚನೆ ಮಾಡಿ ಅ ಬಳಿಕ ಸಂಬಂದಪಟ್ಟ ಪ್ರದೇಶಗಳಿಗೆ ಬೇಟಿ ನೀಡಿ ಬಳಿಕ ಸಭೆಯನ್ನು ಮುಂದಿನ ದಿನಗಳಲ್ಲಿ ಮಾಡುವ. ಕೇವಲ ಒಂದೇ ಸಭೆಯಲ್ಲಿ ನಿರ್ಧಿಷ್ಟವಾದ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿ.ಸಿ.ರೋಡಿನ ಸರ್ವೆಸ್ ರಸ್ತೆಯಿಂದ ಉಂಟಾಗಿರುವ ಸಮಸ್ಯೆಗಳು ನಿವಾರಣೆಯಾದರೆ ಇಲ್ಲಿನ ಭಾಗಶಃ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಂತೆ. ಈ ನಿಟ್ಟಿನಲ್ಲಿ ರಸ್ತೆಯಲ್ಲಿಯೇ ಗಂಟೆಗಟ್ಟಲೆ ನಿಲುಗಡೆಗೊಳಿಸುವ ಬಸ್ಸುಗಳ ವಿರುದ್ದ ಕ್ರಮ ಜರುಗಿಸ ಬೇಕು, ಇಲ್ಲಿ ಪ್ರಯಾಣಿಕರನ್ನು ಹತ್ತಿ ಇಳಿಸಲು ಮಾತ್ರ ಬಸ್ಸುಗಳಿಗೆ ಅವಕಾಶ ನೀಡಬೇಕು. ರಸ್ತೆಯ ಪಕ್ಕ ಚರಂಡಿಯ ಸ್ಲಾಬ್ಗಳು ಮುರಿದು ಬಿದ್ದಿರುವುದಲ್ಲದೆ ಇತ್ತೀಚೆಗೆ ಚರಂಡಿ ದುರಸ್ತಿಗಾಗಿ ಸ್ಲಾಬ್ಗಳನ್ನು ತೆಗದು ಮರಜೋಡಿಸದೇ ಇರುವುದರಿಂದ ಅಪಾಯಸೃಷ್ಟಿಯಾಗಿದ್ದು ಚರಂಡಿಗೆ ತಕ್ಷಣ ಸ್ಲಾಬ್ ಅಳವಡಿಸಬೇಕು ಎನ್ನುವ ಸಲಹೆಗಳು ಸಾರ್ವಜನಿಕರಿಂದ ಕೇಳಿ ಬಂತು.
ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಗಳೂರು, ಪುತ್ತೂರುಗಳಲ್ಲಿರುವಂತೆ ಪೇಪಾರ್ಕಿಂಗ್ ಮಾಡಬಹುದು ಎಂದು ಸಾರ್ವಜನಿಕರೊಬ್ಬರು ಸಲಹೆ ನೀಡಿದರು. ಇದಕ್ಕೆ ಪೂರಕಾವಾಗಿ ಪುರಸಭೆ ನಾಮನಿರ್ದೇ ಶಿತ ಸದಸ್ಯ ಲೋಕೇಶ್ ಸುವರ್ಣ ಮಾತನಾಡಿ ಈ ಬಗ್ಗೆ ಬಂಟ್ವಾಳ ಪುರಸಭೆಯ ಸಮಾನ್ಯ ಸಭೆಯಲ್ಲಿ ಉಲ್ಲೇಖಿಸಲಾಗಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು. ಕೈಕುಂಜೆ ಸಂಪರ್ಕ ರಸ್ತೆಯನ್ನು ಸುಮಾರು 70 ಲಕ್ಷ ವ್ಯಯಿಸಿ ಕಾಂಕ್ರೀಟಿಕರಣಗೊಳಿಸಲಾಗಿದೆ. ಆದರೆ ಅದರ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಮಾತ್ರವಲ್ಲದೆ ಕೆಟ್ಟು ಹೋದ ವಾಹನಗಳನ್ನು ದುರಸ್ತಿ ಪಡಿಸಲು ಈ ರಸ್ತೆಯನ್ನು ಬಲಸಿಕೊಳ್ಳಲಾಗುತ್ತಿದೆ ಎಂದು ದೂರಿದದರು. ಇದರು ಬದಲು ಇಲ್ಲಿಯೇ ಪೇಪಾಕರ್್ ಮಾಡಬಹುದು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಮುಖ್ಯಾಧಿಕಾರಿ ಸುಧಾಕರ್, ಸದಸ್ಯರಾದ ಗೋವಿಂದ ಪ್ರಭು, ಬಿ.ಮೋಹನ್, ನಗರ ಠಾಣಾ ಎಸೈ ನಂದಕುಮಾರ್, ಗ್ರಾಮಾಂತರ ಠಾಣಾ ಎಸೈ ರಕ್ಷಿತ್ ಎ.ಕೆ. ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ್, ನ್ಯಾಯವಾದಿ ರಮಾನಾಥ ಕಾರಂದೂರು ಹಾಜರಿದ್ದರು. ವಿಶ್ವನಾಥ ಚೆಂಡ್ತಿಮಾರ್, ಕೃಷ್ಣ ಅಲ್ಲಿಪಾದೆ, ನಾರಾಯಣ ಪುಂಚಮೆ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.


