ಬೈಂದೂರು:ಖಾಸಗಿ ಬಸ್ಸು ಮತ್ತು ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮಿನಿ ನಡುವೆ ಡಿಕ್ಕಿ ಸಂಭವಿಸಿ 8 ಮಕ್ಕಳು ಸಾವನ್ನಪ್ಪಿದ ಘಟನೆ ಜೂ.21ರಂದು ಮಂಗಳವಾರ ತ್ರಾಸಿ ಮುಲ್ಲಿಕಟ್ಟೆ ನಡುವೆ ಅಪಘಾತ ಸಂಭವಿಸಿದೆ.

ತ್ರಾಸಿಯ ಡೊನ್ ಬೊಸ್ಕೋ ಶಾಲೆಯ ಸುಮಾರು 15 ಮಕ್ಕಳನ್ನು ಸಾಗಿಸುತ್ತಿದ್ದ ಓಮಿನಿ ತ್ರಾಸಿಯ ಮುಲ್ಲಿಕಟ್ಟೆ ಸಮೀಪ ಎದುರು ಬರುತ್ತಿದ್ದ ತ್ರಾಸಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಬಸ್ಸ್ ನ್ನು ಗಮನಿಸದೇ ಶಾಲೆಗೆ ಹೋಗುವ ಮಾರ್ಗದ ತಿರುವಿನಲ್ಲಿ ಓಮಿನಿ ಒಮ್ಮೆಲೇ ಹೋಗಿದ್ದು ಬಸ್ ಮತ್ತು ಓಮಿನಿ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಕಾರಿನಲ್ಲಿ 16 ಶಾಲಾ ಮಕ್ಕಳು, ಕಾರು ಚಾಲಕ ಮತ್ತು ಆತನ ಪತ್ನಿ (ಶಾಲಾ ಶಿಕ್ಷಕಿ) ಇದ್ದರು.
ಗಂಭೀರ ಸ್ಥಿತಿಯಲ್ಲಿರುವ ಮಕ್ಕಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಕ್ಕಳೆಲ್ಲ ನರ್ಸರಿ, ಎಲ್‌ಕೆಜಿ, ಯುಕೆಜಿ ಮುಂತಾದ ತರಗತಿಗಳಿಗೆ ಸೇರಿದವರು ಎನ್ನಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಶಾಲಾ ಮಕ್ಕಳ ಈ ದುರಂತಕ್ಕೆ ಕುಂದಾಪುರಕ್ಕೆ ಕುಂದಾಪುರವೇ ದಂಗುಬಡಿದು ಹೋಗಿದೆ. ಕುಂದಾಪುರ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಮೊದಲ ಮಳೆಗೆ ಈ ಭಾರೀ ದುರಂತ ಸಂಭವಿಸಿದೆ.




