ಬಂಟ್ವಾಳ:ತಾಲ್ಲೂಕಿನ ಸರಪಾಡಿ ಪೆರ್ಲ ಕ್ವಾರ್ಟರ್ಸ್ ಎಂಬಲ್ಲಿ ತನ್ನ ಮನೆಗೆ ಅಕ್ರಮ ಪ್ರವೇಶಿಸಿದ ಭಾವನೇ ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ ಘಟನೆ ಸೋಮವಾರ ನಡೆದಿದೆ. ಆರೋಪಿಯನ್ನು ಇಲ್ಲಿನ ನಿವಾಸಿ ಜಯಾನಂದ ಎಂದು ಗುರುತಿಸಲಾಗಿದೆ. ಇಲ್ಲಿನ ನಿವಾಸಿ ದಿವಂಗತ ಗುರುವ ಎಂಬವರ ಪುತ್ರಿ ಜಾನಕಿ ಮಂಗಳೂರಿನ ಪಡಿಲ್‍ನಲ್ಲಿ ಮನೆಕೆಲಸ ಮಾಡುತ್ತಿದ್ದು, ಸೋಮವಾರ ಮಧ್ಯಾಹ್ನ ತನ್ನ ತಾಯಿಯನ್ನು ನೋಡಲು ಸರಪಾಡಿ ಮನೆಗೆ ಬಂದಿದ್ದಾರೆ. ಇದೇ ವೇಳೆ ಮನೆಗೆ ನನ್ನ ಭಾವ (ಅಕ್ಕನ ಗಂಡ) ಅಕ್ರಮ ಪ್ರವೇಶಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಳಿಕ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಯುವತಿ ದೂರು ಸಲ್ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
—
