ಧರ್ಮಸ್ಥಳ: ಕೆರೆಗೆ ಬಾಗಿನ ಅರ್ಪಣೆ ಹಾಗೂ ಶಾಲಾವನ ಉದ್ಘಾಟನೆಯೊಂದಿಗೆ ಪರಿಸರರಕ್ಷಣೆಯ ಸಂದೇಶ ನೀಡಿದ ವಿರೇಂದ್ರ ಹೆಗ್ಡೆ ಅವರು ಮಳೆ ಬೀಳದೆ ಬರಗಾಲ ಬಂದಿದೆಎಂದುಚಿಂತಿಸುವ ಬದಲು ಭೂಮಿಗೆ ಬಿದ್ದಜೀವಜಲದರಕ್ಷಣೆಗೆ ನಾವೆಲ್ಲ ಮುಂದಾಗಬೇಕಿದೆ.ನೀರಿನ ಮೂಲವನ್ನು ಸಂರಕ್ಷಣೆ ಮಾಡುವ ಕೆಲಸ ಅತ್ಯಂತ ಪುಣ್ಯದ ಕೆಲಸವಾಗಿದ್ದು ಜಲ ಮರುಪೂರಣದಕಾರ್ಯ ವ್ಯಾಪಕವಾಗಿ ನಡೆಯಬೇಕು.ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.ಅವರುತಾಲೂಕಿನಕೊಟಬಾಗಿಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸಹಾಯಧನದೊಂದಿಗೆ ಹೂಳೆತ್ತಲಾದ ಕೆರೆಗೆ ಬಾಗಿನ ಅರ್ಪಿಸಿ ಶಾಲಾವನ ಉದ್ಘಾಟಿಸಿ ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ನಾವು ಎಂಬ ಪದ ಸಂಕುಚಿತಗೊಂಡು ಸ್ವಾರ್ಥ ಹೆಚ್ಚಾಗುತ್ತಿದೆ.ಬದಲಾಗಿ ನಮ್ಮಗ್ರಾಮ, ನಮ್ಮಕೆರೆ, ನಮ್ಮ ಪರಿಸರ ಇವೆಲ್ಲವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಭಾವನೆ ವೃದ್ಧಿಯಾಗಬೇಕಿದೆ.ಈ ಭಾಗದಲ್ಲಿ ಫಲವತ್ತಾದ ಭೂಮಿಯಿದೆ.ರೈತರ ಶ್ರಮದ ಬಗ್ಗೆ ನನಗೆ ಅಪಾರವಾದಗೌರವವಿದೆ. ಆದರೆರೈತರಅತಿಯಾದಖರ್ಚಿನಿಂದಾಗಿ ಕೃಷಿ ನಷ್ಠದಾಯಕ ಎಂಬ ಮನೋಭಾವನೆಉಂಟಾಗಿದ್ದುರೈತರುಕೃಷಿಯಲ್ಲಿಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಬೇಕು.
ಇದಕ್ಕೆ ಪೂರಕವಾಗಿಗ್ರಾಮಾಭಿವೃದ್ಧಿಯೋಜನೆಯ ಮೂಲಕ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿಗಳನ್ನು ಗ್ರಾಮ ಮಟ್ಟದಲ್ಲಿಆಯೋಜಿಸಲಾಗುತ್ತಿದ್ದು ಪ್ರಯೋಜನ ಪಡೆದುಕೊಳ್ಳಿ ಎಂದರು.ಹೂಳೆತ್ತಲಾದ ಕೆರೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಎಂ.ವಿ. ಮಂಜಣ್ಣನವರ್ ಪೂಜ್ಯರಧರ್ಮ ಕಾರ್ಯಗಳು ನಾಡಿನಾದ್ಯಂತ ನಡೆಯುತ್ತಿದ್ದು ಅವೆಲ್ಲವುಗಳಲ್ಲಿ ಜೀವಜಲದರಕ್ಷಣೆಗೆಒತ್ತು ನೀಡುತ್ತಿರುವುದು ಶ್ಲಾಘನೀಯಇದು ನಮ್ಮೆರ ಭಾಗ್ಯಎಂದರು.
ಸಮಾರಂಭದಲ್ಲಿಗ್ರಾಮಾಭಿವೃದ್ಧಿಯೋಜನೆಯಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್. ಮಂಜುನಾಥ್, ಪ್ರಾದೇಶಿಕ ನಿರ್ಧೆಶಕರಾದಎನ್.ಜಯಶಂಕರ ಶರ್ಮ, ಕೊಟಬಾಗಿಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ, ತಾ.ಪಂ ಸದಸ್ಯರುದ್ರಗೌಡ ಪಾಟೀಲ್, ಸಚಿವ ವಿನಯ ಕುಲಕರ್ಣಿ ತಣಿ ಯವರ ಆಪ್ತ ಸಹಾಯಕ ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿಯೋಜನೆಯಧಾರವಾಡಜಿಲ್ಲಾ ನಿರ್ದೇಶಕ ದಿನೇಶ್ ಎಂ.ಪ್ರಸ್ಥಾವಿಸಿ ಸ್ವಾಗತಿಸಿದರೆ,ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಜಿ ಭಜಂತ್ರಿ ಮತ್ತು ವಿದ್ಯಾರ್ಥಿ ಗಳು ಪ್ರಾರ್ಥನೆಗೀತೆ ಹೇಳಿದರು. ನವಲಗುಂದಯೋಜನಾಧಿಕಾರಿ ಸತೀಶ್ಎಚ್.ನಿರೂಪಿಸಿದರು. ಧಾರವಾಡಯೋಜನಾಧಿಕಾರಿ ಕುಸುಮಾಧರ ವಂದಿಸಿದರು.

